ಖಾಕಿ, ಜುಗಾರಿ ಕ್ರಾಸ್, ರಣಂ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಯುವ ಸಾಮ್ರಾಟ್ ಚಿರು ಸರ್ಜಾ ಸದ್ದಿಲ್ಲದೆ ‘ಆದ್ಯಾ’ ಚಿತ್ರದ ಶೂಟಿಂಗ್ ಮುಗಿಸಿ ಫಸ್ಟ್ ಲುಕ್ ಮೂಲಕ ಎಂಟ್ರಿಕೊಟ್ಟಿದ್ದಾರೆ. ಹಾಗಂತ ಫಸ್ಟ್ ಲುಕ್‍ನಲ್ಲಿ ಚಿರು ಸರ್ಜಾ ನೋಡೋಕೆ ಸಿಗೋದಿಲ್ಲ.ಹೌದು. ಚಿತ್ರದ ಕುತೂಹಲವನ್ನು ಕಾಯ್ದಿಟ್ಟಿರುವ ಚಿತ್ರತಂಡ ಫಸ್ಟ್ ಲುಕ್‍ನಲ್ಲೂ ಆ ಕುತೂಹಲವನ್ನು ಉಳಿಸಿಕೊಂಡಿದೆ. ಪುಟ್ಟ ಬಾಲಕಿ ಬೆನ್ನು ಮಾಡಿ ನಿಂತಿರುವ ‘ಆದ್ಯಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಖತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.‘ಆದ್ಯಾ’ ಚಿತ್ರದ ಮೂಲಕ ನಿರ್ದೇಶಕ ಕೆ.ಎಂ.ಚೈತನ್ಯ ಚಿರು ಸರ್ಜಾ ಜುಗಲ್ ಬಂದಿ ನಾಲ್ಕನೇ ಬಾರಿ ಮುಂದುವರಿದಿದೆ. ಈಗಾಗಲೇ ಆಟಗಾರ, ಆಕೆ, ಅಮ್ಮಾ ಐ ಲವ್ ಚಿತ್ರಗಳಲ್ಲಿ ಈ ಜೋಡಿ ಮೋಡಿ ಮಾಡಿದೆ. ಇದೀಗ ನಾಲ್ಕನೇ ಚಿತ್ರದಲ್ಲೂ ಇವರ ಹ್ಯಾಟ್ರಿಕ್ ಕಾಂಬಿನೇಷನ್ ಮುಂದುವರಿದಿದೆ.ಸೈಲೆಂಟ್ ಆಗಿ ಸೆಟ್ಟೇರಿದ್ದ ‘ಆದ್ಯಾ’ ಚಿತ್ರ ಒಂದಿಷ್ಟು ಅಡೆತಡೆಗಳ ನಡುವೆ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರದ ಫಸ್ಟ್ ಲುಕ್ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿದ್ದು, ಟಿ.ಜಿ. ವಿಶ್ವ ಪ್ರಸಾದ್, ರಘುನಾಥ್ ಎಸ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಚಿರು ಸರ್ಜಾ ಪಾತ್ರ ಹಾಗೂ ಚಿತ್ರದ ವಿಶೇಷತೆಗಳ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಸಂಪೂರ್ಣ ಮಾಹಿತಿ ನೀಡಲಿದೆ.Sign in to your account
Username or Email Address


Password

 Remember Me


