ಬೆಂಗಳೂರು: ಸಿಎಂ ಬೆಂಗಾವಲು ವಾಹನವನ್ನು ಫಾಲೋ ಮಾಡುತ್ತಿದ್ದ ಕಾರೊಂದು ಅತಿವೇಗವಾಗಿ ಬಂದು ಮತ್ತೊಂದು ಬದಿಯ ರಸ್ತೆಗೆ ನುಗ್ಗಿದ ಘಟನೆ ಯಶವಂತಪುರ ಫ್ಲೈ ಓವರ್ ಮೇಲೆ ನಡೆದಿದೆ.ಕಾರ್ಯಕ್ರಮದ ನಿಮಿತ್ತ ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ತುಮಕೂರಿಗೆ ಹೊರಟ್ಟಿದ್ದರು. ಆ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಸೆಲ್ವಕುಮಾರ್ ಅವರು ಕೂಡ ಸಿಎಂ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಅವರ ಕಾರು ಬೆಂಗಾವಲು ವಾಹನವನ್ನು ಫಾಲೋ ಮಾಡುತಿತ್ತು.ಸಿಎಂ ಬೆಂಗವಾಲು ವಾಹನ ಅತಿವೇಗವಾಗಿ ಹೋಗುವಾಗ ಕಾರ್ಯದರ್ಶಿ ಅವರ ಕಾರು ಚಾಲಕ ಅದೇ ವೇಗವನ್ನು ಪಾಲನೆ ಮಾಡಲು ಹೋಗಿದ್ದಾನೆ. ಆದರೆ ಫ್ಲೈ ಓವರ್ ಮೇಲೆ ಗಾಡಿ ನಿಯಂತ್ರಣಕ್ಕೆ ಸಿಗದೇ ಅಪಘಾತಕ್ಕೆ ಒಳಗಾಗಿದೆ. ಚಾಲಕ ವಿನಯ್‍ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಅಪಘಾತದ ರಭಸಕ್ಕೆ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳಾದ ಕ್ಯಾಂಟರ್ ಮತ್ತು ಆಟೋ ಜಖಂ ಆಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.Sign in to your account
Username or Email Address


Password

 Remember Me


