ಯಾದಗಿರಿ: ಸಾಮಾನ್ಯವಾಗಿ ಹುಡುಗ, ಹುಡಗಿ ಲವ್ ಮಾಡೋದನ್ನ ನೋಡಿರುತ್ತೀರಿ. ತನ್ನ ಹುಡುಗಿ ಯಾರ ಜೊತೆಗಾದ್ರು ಮಾತಾಡಿದರೆ ಹುಡುಗ ಸಿಟ್ಟು ಮಾಡಿಕೊಳ್ಳುವುದು ಸಹಜ. ಆದರೆ ಯಾದಗಿರಿಯಲ್ಲಿ ಒಂದು ಡಿಫರೆಂಟ್ ಜೋಡಿ ಸಖತ್ ಫೇಮಸ್ ಆಗಿದ್ದಾರೆ.ಲವರ್ಸ್ ಅಂದಾಕ್ಷಣ ಯಾವುದೋ ಹುಡುಗ ಹುಡುಗಿ ಅನ್ಕೊಬೇಡಿ. ಯಾದಗಿರಿಯಲ್ಲಿ ಸಖತ್ ಸದ್ದು ಮಾಡುತ್ತಿರೋದು ಎರಡು ಕೋತಿಗಳು ಲವ್ ಸ್ಟೋರಿ. ಹೌದು ಯಾದಗಿರಿಯ ದೇವದುರ್ಗ ಕ್ರಾಸ್ ಬಳಿ ಈ ಕ್ಯೂಟ್ ಕೋತಿಗಳು ಇರುತ್ತವೆ. ಇಲ್ಲಿನ ಜನರು ಈ ಕೋತಿ ಜೋಡಿಗೆ ಜಾನ್ ಮತ್ತು ರಾಣಿ ಅಂತ ಹೆಸರನ್ನು ಕೂಡ ಇಟ್ಟಿದ್ದಾರೆ. ಈ ರಾಣಿ, ಜಾನ್ ಜೋಡಿಗೆ ಮಾಂಸ ಮತ್ತು ಸಸ್ಯ ಎರಡು ಬಗೆಯ ತಿಂಡಿ ತಿನಿಸುಗಳು ಅಚ್ಚುಮೆಚ್ಚು. ಆದರೆ ರಾಣಿಗೆ ಮೊಸರು ಎಂದರೆ ಸಿಕ್ಕಪಟ್ಟೆ ಇಷ್ಟ. ಹೀಗಾಗಿ ಮೊಸರು ಕೊಟ್ಟರೆ ಸಾಕು ರಾಣಿ ಸೆಲ್ಫಿ ಸಖತ್ ಪೋಸ್ ಕೊಡುತ್ತಾಳೆ.ಮೊಸರು ಅಥವಾ ತಿನ್ನೋಕೆ ತಿಂಡಿ ಕೊಟ್ಟರೆ ಸೆಲ್ಫಿಗೆ ಪೋಸ್ ಕೊಡುವ ರಾಣಿಯ ಗುಣ ಜಾನ್‍ಗೆ ಒಂದು ಸ್ವಲ್ಪವೂ ಇಷ್ಟ ಇಲ್ಲ. ಯಾರಾದರು ರಾಣಿ ಜೊತೆ ಸೆಲ್ಫಿ ತಗೆದುಕೊಂಡರೆ ಜಾನ್ ಸಿಟ್ಟು ಮಾಡಿಕೊಂಡು ಚಾವಣಿ ಏರಿಬಿಡುತ್ತಾನೆ. ಈ ಎರಡು ಕೋತಿಗಳ ಲವ್‍ಗೆ ದೇವದುರ್ಗ ಕ್ರಾಸ್ ಬಳಿ ಇರುವ ವ್ಯಾಪಾರಿಗಳು ಫುಲ್ ಫೀದಾ ಆಗಿದ್ದಾರೆ. ಈ ಕೋತಿಗಳೆಂದರೆ ಇಲ್ಲಿನ ನಿವಾಸಿಗಳಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ತಮ್ಮ ಮಕ್ಕಳಂತೆ ಈ ಕೋತಿಗಳನ್ನು ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.Sign in to your account
Username or Email Address


Password

 Remember Me


