ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ರಲ್ಲಿ ಶೈನ್ ಶೆಟ್ಟಿ ಮತ್ತು ವಾಸುಕಿ ಅವರನ್ನು ನಾಲ್ವರು ಟಾರ್ಗೆಟ್ ಮಾಡಿದ್ದಾರೆ.ಬಿಗ್‍ ಮನೆಯಲ್ಲಿರುವ ತಮ್ಮ ಟಾರ್ಗೆಟ್ ಯಾರು ಎಂಬುವುದನ್ನು ತಿಳಿಸಲು ಬಿಗ್‍ಬಾಸ್ ಒಂದು ಚಟುವಟಿಕೆಯನ್ನು ನೀಡಿದ್ದರು. ಅದೇನೆಂದರೆ ಪ್ರತಿಯೊಬ್ಬರು ಮನೆಯಲ್ಲಿರುವವರಲ್ಲಿ ತಮ್ಮ ಟಾರ್ಗೆಟ್ ಅಂದರೆ ತಮ್ಮ ಪ್ರಬಲ ಪ್ರತಿಸ್ಪರ್ಧಿ ಯಾರು ಎಂಬುದನ್ನು ತಿಳಿಸಬೇಕಿತ್ತು. ಜೊತೆಗೆ ಅದಕ್ಕೆ ಸೂಕ್ತ ಕಾರಣ ಕೊಟ್ಟು ಅವರ ಮುಖಕ್ಕೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಬೇಕಿತ್ತು.ಆಗ ವಾಸುಕಿ, ಹರೀಶ್ ರಾಜ್, ಕಿಶನ್ ಮತ್ತು ಕುರಿ ಪ್ರತಾಪ್ ನಾಲ್ವರು ಶೈನ್ ಶೆಟ್ಟಿಯೇ ನಮ್ಮ ಟಾರ್ಗೆಟ್ ಎಂದು ಹೇಳಿದ್ದಾರೆ. ಈ ಮನೆಯಲ್ಲಿ ಶೈನ್ ನಮಗೆ ಸ್ನೇಹಿತನಾಗಿದ್ದರೂ ಗೇಮ್ ಎಂದು ನೋಡಿದಾಗ ಪ್ರತಿಯೊಬ್ಬರಿಗೂ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಗೇಮ್ ಮಾತ್ರವಲ್ಲದೇ, ಬುದ್ಧಿ, ಪ್ಲಾನ್ ಮಾಡುವುದಲ್ಲಿಯೂ ಇವರೇ ಮುಂದೆ ಇದ್ದಾರೆ. ಹೀಗಾಗಿ ಈ ವಾರ ನಾವು ಶೈನ್ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಎಲ್ಲರೂ ಕಾರಣ ಕೊಟ್ಟಿದ್ದಾರೆ.ಇನ್ನೂ ಚಂದನ್ ಆಚಾರ್, ಪ್ರಿಯಾಂಕಾ, ಶೈನ್ ಶೆಟ್ಟಿ ಮತ್ತು ಭೂಮಿ, ವಾಸುಕಿ ವೈಭವ್ ನಮ್ಮ ಟಾರ್ಗೆಟ್ ಎಂದು ಹೇಳಿದ್ದಾರೆ. ದೀಪಿಕಾ ಕುರಿ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದ್ದರೆ, ಚಂದನಾ, ಭೂಮಿ ಶೆಟ್ಟಿಯನ್ನು ನನ್ನ ಟಾರ್ಗೆಟ್ ಎಂದು ಹೇಳಿದ್ದಾರೆ.ಈ ವಾರ ಬಿಗ್‍ಮನೆಯಿಂದ ಹೋರಹೋಗಲು, ಕಿಶನ್, ಹರೀಶ್ ರಾಜ್, ಚಂದನಾ, ಭೂಮಿ ಶೆಟ್ಟಿ, ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ನಾಮಿನೇಟ್ ಆಗಿದ್ದಾರೆ.Sign in to your account
Username or Email Address


Password

 Remember Me


