ಶಿವಮೊಗ್ಗ: ತಂಪು ಪಾನೀಯದ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಹೋಟೆಲ್ ವೊಂದರಲ್ಲಿ ನಡೆದಿದೆ.ಇಂದು ಸಂಜೆಯ ವೇಳೆಗೆ ಮೂರು ಮಂದಿ ಗ್ರಾಹಕರ ಗುಂಪೊಂದು ಹೋಟೆಲ್ ಗೆ ತೆರಳಿ ತಂಪು ಪಾನೀಯ ಕುಡಿಯಲು ಹೋಗಿದ್ದಾರೆ. ಹೋಟೆಲ್ ನವರು ತಂಪು ಪಾನೀಯವನ್ನು ನೀಡಿದ್ದಾರೆ. ಈ ವೇಳೆ ಗ್ರಾಹಕ ಸುರೇಂದ್ರ ಎಂಬುವರು ಕುಡಿಯುತ್ತಿದ್ದ ತಂಪು ಪಾನೀಯ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿದ್ದು ತಂಪು ಪಾನೀಯ ಕುಡಿಯುತ್ತಿದ್ದ ಗ್ರಾಹಕನಿಗೆ ಶಾಕ್ ಆಗಿದೆ.ಕುಡಿಯುತ್ತಿದ್ದ ಬಾಟಲಿಯನ್ನು ಅರ್ಧಕ್ಕೆ ಬಿಟ್ಟು ಹೋಟೆಲ್ ಮಾಲೀಕರನ್ನು ಕರೆದು ತೋರಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಬಾಟಲಿಯನ್ನು ಹಿಂಪಡೆದುಕೊಂಡಿದ್ದಾರೆ. ಆದರೆ ಅಷ್ಟಕ್ಕೇ ಸಮಾಧಾನಗೊಳ್ಳದ ಗ್ರಾಹಕ ಘಟನೆ ಬಳಿಕ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರು.ಗ್ರಾಹಕರು ನೀಡಿದ ದೂರಿನ ಮೇರೆಗೆ ಹೋಟೆಲ್ ಗೆ ಆಗಮಿಸಿದ ಅಧಿಕಾರಿಗಳು ತಂಪು ಪಾನೀಯ ಬಾಟಲಿಯನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ತಂಪು ಪಾನೀಯ ಕಂಪನಿಯ ಅಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಅಧಿಕಾರಿ ಡಾ. ಶಮಾ ತಿಳಿಸಿದ್ದಾರೆ.Sign in to your account
Username or Email Address


Password

 Remember Me


