ಬೆಂಗಳೂರು: ಪರಮ ಪೂಜ್ಯ ಶ್ರೀ ವಿಶ್ವೇಶ ತೀರ್ಥರು ಅಪಾರ ಭಕ್ತರನ್ನ, ಶಿಷ್ಯ ವೃಂದವನ್ನ ಅಗಲಿ ಬೃಂದಾವನದಲ್ಲಿ ಕೃಷ್ಣೈಕ್ಯರಾಗಿದ್ದಾರೆ. ಭಾನುವಾರ ಬೆಳಗ್ಗೆ ಶ್ರೀಗಳು ದೇಹತ್ಯಾಗ ಮಾಡಿ ಶ್ರೀಕೃಷ್ಣನ ಪಾದ ಸೇರಿದ್ದಾರೆ.ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕನ್ನಡಪರ ಸಂಘಟನೆಗಳು ಇಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಶ್ರೀಗಳ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ, ದೀಪ ಬೆಳಗಿ ಪೇಜಾವರ ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.ಇಂದು ಬೆಳಗ್ಗೆ ಕರುನಾಡ ಸಂಘಟನೆಗಳ ಒಕ್ಕೂಟದ ಸದಸ್ಯರು ಹಾಗೂ ಶ್ರೀಗಳ ಭಕ್ತರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೃಷ್ಣೈಕ್ಯರಾದ ಶ್ರೀ ವಿಶ್ವೇಶತೀರ್ಥರ ಆತ್ಮಕ್ಕೆ ಶ್ರೀಕೃಷ್ಣ ಪರಮಾತ್ಮ ಶಾಂತಿ ನೀಡಲಿ ಎಂದು ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.Sign in to your account
Username or Email Address


Password

 Remember Me


