ಚಿಕ್ಕೋಡಿ/ಬೆಳಗಾವಿ: ಗೋ ಮಾತೆ ಎಂದು ಪೂಜಿಸುವ ಹಸುವಿಗೆ ಸೀಮಂತ ಕಾರ್ಯಕ್ರಮ ನೇರವೇರಿಸಿದ ಅಪರೂಪದ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ ನಡೆದಿದೆ.ಮಾಂಗೂರ ಗ್ರಾಮದ ರಾವಸಾಹೇಬ ಜಿನ್ನಪ್ಪಾ ಮಾಣಕಾಪುರೆ ಅವರಿಗೆ ಸೇರಿದ ಹಸು ಗರ್ಭ ಧರಿಸಿತ್ತು. ಮಣಕಾಪೂರೆ ಕುಟುಂಬಸ್ಥರು ತಮ್ಮ ಗರ್ಭವತಿ ಹಸುವಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಹಸುವಿಗೆ ಉಡಿ ತುಂಬಿ, ಹೂ ಮಾಲೆ ಹಾಕಿ ಹೂಗಳ ದಂಡಿಯನ್ನು ಕಟ್ಟಿ, ಹಸಿರು ಬಳೆ ತೊಡೆಸಿ, ಸೀರೆಯನ್ನು ತೊಡಿಸಿ ಶೃಂಗರಿಸಿದ್ದರು.ಜೊತೆಗೆ ಗ್ರಾಮದ ಮುತೈದೆಯರು ಉಡಿ ತುಂಬಿದ್ದಾರೆ. ಹಸುವಿಗೆ ಉಡಿ ತುಂಬುವ ಅಪರೂಪದ ಸೀಮಂತ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಕಾರ್ಯಕ್ರಮಕ್ಕೆ ಮಣಕಾಪೂರೆ ಕುಟುಂಬಸ್ದರು ಸೇರಿದಂತೆ ಅನೇಕ ಹೆಣ್ಣು ಮಕ್ಕಳು ಹಾಗೂ ಪುರುಷರು ಭಾಗಿಯಾಗಿದ್ದರು. ಇವರೆಲ್ಲರೂ ಹಸುವಿನ ಸೀಮಂತ ಕಾರ್ಯಕ್ಕೆ ಸಾಕ್ಷಿಯಾಗಿದ್ದರು.Sign in to your account
Username or Email Address


Password

 Remember Me


