ಕೋಲಾರ: ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆಗಾಗಿ ಪೊಲೀಸರ ಮೋರೆ ಹೋಗಿದೆ. ಸಾಮಾಜಿಕ ಜಾಲತಾಣದ ಮೂಲಕ ರಕ್ಷಣೆ ಕೋರಿದ್ದಾರೆ.ಕೋಲಾರ ತಾಲೂಕು ನುಕ್ಕನಹಳ್ಳಿ ಗ್ರಾಮದ ಅಶ್ವಿನಿ ಹಾಗೂ ಶಿಳ್ಳಂಗೆರೆ ಗ್ರಾಮದ ಶ್ರೀನಿವಾಸ್ ಪ್ರೀತಿಸಿ ಮದುವೆಯಾದ ಪ್ರೇಮಿಗಳು. ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿರುವ ಪ್ರೇಮಿಗಳು ನೋಂದಣಿ ಕಚೇರಿಯಲ್ಲಿ ರಿಜಿಸ್ಟಾರ್ ಮದುವೆಯಾಗಿ, ರಕ್ಷಣೆ ನೀಡುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ.ಪೋಷಕರು ಅಂತರ್ಜಾತಿ ವಿವಾಹಕ್ಕೆ ಒಪ್ಪದಿದ್ದರೂ ಅವರ ವಿರೋಧದ ನಡುವೆ ಅಶ್ವಿನಿ ಹಾಗೂ ಶ್ರೀನಿವಾಸ್ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗಿಯ ಮನೆಯವರಿಂದ ಇಬ್ಬರಿಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ತಲೆ ಮರೆಸಿಕೊಂಡಿರುವ ಪ್ರೇಮಿಗಳು ಆರೋಪಿಸಿದ್ದಾರೆ. ಹಾಗೆಯೇ ರಕ್ಷಣೆ ನೀಡುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಪ್ರೇಮಿಗಳ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಷ್ಟೇ ಅಲ್ಲದೆ ರಕ್ಷಣೆಗೆ ನಿಲ್ಲಬೇಕಾದ ಕೆಲ ಸಂಘಟನೆಗಳ ಮುಖಂಡರಿಂದಲೇ ಪ್ರೇಮಿಗಳಿಗೆ ಜೀವ ಬೆದರಿಕೆ ಇದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿದೆ.Sign in to your account
Username or Email Address


Password

 Remember Me


