ಯಾದಗಿರಿ: ವ್ಯಕ್ತಿಯೋರ್ವನಿಗೆ ಮಹಿಳೆ ಮತ್ತು ಸಹ ಪ್ರಯಾಣಿಕರು ಚಪ್ಪಲಿಯಿಂದ ಹೊಡೆದ ಘಟನೆ ಯಾದಗಿರಿಯಿಂದ ಬೆಂಗಳೂರಿಗೆ ಹೊರಟಿದ್ದ ರೈಲಿನಲ್ಲಿ ನಡೆದಿದೆ.ವ್ಯಕ್ತಿ ರೈಲಿನ ಜನರಲ್ ಬೋಗಿಯಲ್ಲಿ ಫುಲ್ ಸೀಟಿನಲ್ಲಿ ಒಬ್ಬನೇ ಮಲಗಿದ್ದನು. ಇದನ್ನು ಪ್ರಶ್ನಿಸಿದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದ್ದಿದ್ದಾನೆ. ಅಲ್ಲದೆ ಹಿಂದಿ ಭಾಷೆಯಲ್ಲಿ ಸಹ ಪ್ರಯಾಣಿಕರಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ.ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು, ಈತನಿಗೆ ಚಪ್ಪಲಿ ಸೇವೆಯ ಜೊತೆಗೆ ಧರ್ಮದೇಟು ನೀಡಿದ್ದಾರೆ. ಒದೆ ಬೀಳುತ್ತಿದ್ದಂತೆಯೇ ಆತ ಕೈಮುಗಿದು ಎಲ್ಲರ ಬಳಿ ಕ್ಷಮೆ ಕೇಳಿದ್ದಾನೆ. ವ್ಯಕ್ತಿಯ ಈ ರಂಪಾಟವನ್ನ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


