ಬೆಂಗಳೂರು: ನಟ ಡಾಲಿ ಧನಂಜಯ್ ಅವರಿಗೆ ಪುಟ್ಟ ಬಾಲಕನೋರ್ವ 10 ರೂಪಾಯಿ ಗಿಫ್ಟ್ ಕೊಟ್ಟಿದ್ದು, ಇದನ್ನು ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.ಹೌದು ನಟ ಡಾಲಿ ಧನಂಜಯ್ ಅವರು ಇತ್ತೀಚಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕನೋರ್ವ ಧನಂಜಯ್ ಅವರ ಬಳಿ ಡೈಲಾಗ್ ಹೇಳಿಸಿ ನಂತರ ಅವರಿಗೆ ಹತ್ತು ರೂಪಾಯಿಯನ್ನು ಗಿಫ್ಟ್ ಆಗಿ ನೀಡಿದ್ದಾನೆ.https://www.instagram.com/p/B6pulycFDTx/ಈ ವಿಚಾರವಾಗಿ ಹುಡುಗನ ಫೋಟೋ ಮತ್ತು ಆ ಹತ್ತು ರೂಪಾಯಿ ನೋಟನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಧನಂಜಯ್ ಅವರು, ತಾನು ಡೈಲಾಗ್ ಹೇಳಿ ನನ್ನ ಬಳಿಯೂ ಡೈಲಾಗ್ ಹೇಳಿಸಿ ಗಿಫ್ಟ್ ಕೊಟ್ಟ ಹುಬ್ಬಳ್ಳಿ ಹುಡುಗ. ನಿನ್ನ ಪ್ರೀತಿ ಮತ್ತು ಗೌರವಕ್ಕೆ ಧನ್ಯವಾದಗಳು. ಒಂದು ರೂಪಾಯಿ ಕೊಡದೇ ವರ್ಷಾನುಗಟ್ಟಲೇ ಕಲಾವಿದರನ್ನು ದುಡಿಸಿಕೊಳ್ಳುವರ ಮಧ್ಯೆ ನಿಂದು ದೊಡ್ಡ ಮನಸ್ಸು ಕಣ್ಲ ಎಂದು ಬರೆದುಕೊಂಡಿದ್ದಾರೆ.ಈಗ ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇನ್ನೂ ಕೆಲವರು ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದು, ಒಬ್ಬ ನಿಜವಾದ ಕಲಾವಿದನಿಗೆ ಇದಕ್ಕಿಂತ ದೊಡ್ಡ ಬಹುಮಾನ ಬೇರೆ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಕಲಿಯುಗದಲ್ಲಿ ನಿಷ್ಕಲ್ಮಶ ಹೃದಯ, ಮನಸ್ಸು ಮಕ್ಕಳಲ್ಲಿ ಮಾತ್ರ ಇರುತ್ತದೆ. ಆ ಮಕ್ಕಳಲ್ಲಿ ದೇವರು ಇರುತ್ತಾರೆ. ಅಲ್ಲಿಗೆ ನಿಮಗೆ ದೇವರು ಕೊಟ್ಟ ಉಡುಗೊರೆ. ನಿಮ್ಮ ಮನಸ್ಸು ಕೂಡ ಮಗುವಿನ ಮನಸ್ಸು ಹೃದಯ ಶ್ರೀಮಂತಿಕೆ ಜಾಸ್ತಿ ಇದೆ ಎಂದು ಕಮೆಂಟ್ ಮಾಡಿದ್ದಾರೆ.Sign in to your account
Username or Email Address


Password

 Remember Me


