ಕಲಬುರಗಿ: ಯತಿಶ್ರೇಷ್ಠರಲ್ಲಿ ಒಬ್ಬರಾದ ಉಡುಪಿಯ ಪೇಜಾವರ ಶ್ರೀಗಳು ಮರಳಿ ನಾರಾಯಣನ ಸನ್ನಿಧಿ ಸೇರಿದ್ದಾರೆ. ಇದಕ್ಕೆ ದುಃಖ ಪಡುವುದೇನಿಲ್ಲ ಎಂದು ಖ್ಯಾತ ಜ್ಯೋತಿಷಿ, ರಾಜಗುರು ದ್ವಾರಕನಾಥ್ ಕಲಬುರಗಿಯಲ್ಲಿ ಹೇಳಿದ್ದಾರೆ.ಶ್ರೀಗಳಿಗೆ ನಾನು ಹಲವು ಬಾರಿ ಭೇಟಿಯಾಗಿ ಮಾತನಾಡಿಸಿದ್ದು ಈ ಹಿಂದೆ ಶ್ರೀಗಳು ನಮ್ಮ ಮನೆಗೆ ಬಂದಾಗ ನೀವು ಸನ್ಯಾಸ ಬಿಟ್ಟು ರಾಜಕಾರಣಕ್ಕೆ ಹೋಗಿದ್ದರೆ ಪ್ರಧಾನಿಯಾಗಬಹುದು ಎಂದು ಹೇಳಿದ್ದೆ. ಮನುಷ್ಯ ನೋವಿಗೆ ಜಾತಿ ಬೇಧ ದೂರ ಇಟ್ಟು ಸ್ಪಂದಿಸುತ್ತಿದ್ದರು ಎಂದು ತಿಳಿಸಿದ್ದಾರೆ.ಮತ್ತೆ ಶ್ರೀಗಳ ಚೇತನ ಭಾರತದಲ್ಲಿ ಮೂಡಲಿ. ಅವರು ಈಗ ಕಾಣದಿದ್ದರೂ ಅವರ ಸ್ಮರಣೆ ಯಾವತ್ತಿಗೂ ಇರಲಿ. ಅವರ ಆಶೀರ್ವಾದ ಭಾರತ ಮತ್ತು ಕರ್ನಾಟಕ ಸಾಮ್ರಾಜ್ಯದ ಮೇಲಿ ಸದಾ ಇರಲಿ. ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪ ಮೇಲೆ ಇರಲಿ ಎಂದು ದ್ವಾರಕನಾಥ್ ಹೇಳಿದರು.Sign in to your account
Username or Email Address


Password

 Remember Me


