ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಪದ ಬ್ಯಾಗ್ ಒಂದು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು.ವಿಮಾನ ನಿಲ್ದಾಣದ ಅರೈವಲ್ಸ್ ಗೇಟ್ ಬಳಿಯ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ ಒಂದು ಯಾರೂ ವಾರಸುದಾರರಿಲ್ಲದೆ ಪತ್ತೆಯಾಗಿತ್ತು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಸಾಕಷ್ಟು ಸಮಯ ಕಾದರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಗಿಯಾಗಿದ್ದ ಬ್ಯಾಗ್ ಕಂಡ ಭದ್ರತಾ ಸಿಬ್ಬಂದಿ ಅನುಮಾನ ಪಡುವಂತಾಯಿತು.ಸ್ಥಳಕ್ಕೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಯಂತ್ರದ ಮೂಲಕ ಭದ್ರತಾ ಸಿಬ್ಬಂದಿ ಅನುಮಾನಾಸ್ಪದ ಬ್ಯಾಗನ್ನು ಪರಿಶೀಲನೆ ನಡೆಸಿದರು. ಕೊನೆಗೆ ಯಾವುದೇ ಅನುಮಾನಾಸ್ಪದ ರೀತಿಯ ಸ್ಫೋಟಕ ವಸ್ತುಗಳಿಲ್ಲ ಎಂದು ಖಚಿತ ಪಡಿಸಿಕೊಂಡು ಟ್ರಾಲಿ ಸಮೇತ ಬ್ಯಾಗನ್ನು ಭದ್ರತಾ ಸಿಬ್ಬಂದಿ ತೆಗೆದುಕೊಂಡು ಹೋದರು. ಇನ್ನು ಭದ್ರತಾ ಸಿಬ್ಬಂದಿ ಕೊಂಡೊಯ್ದು ಬ್ಯಾಗ್ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಕಚೇರಿಗೆ ಕೊಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೆಲ ಪ್ರಯಾಣಿಕರು ಆತುರದಲ್ಲಿ ಬ್ಯಾಗ್ ಬಿಟ್ಟು ಹೋಗುವ ಕಾರಣ ಈ ರೀತಿಯ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಆದರೆ ಯಾವುದೇ ಸಮಯದಲ್ಲೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಏರ್‌ಪೋರ್ಟಿನಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತದೆ.Sign in to your account
Username or Email Address


Password

 Remember Me


