ಕೊಪ್ಪಳ: ರಸ್ತೆ ಕಾಮಗಾರಿಗಳಿಗೆ ಬಳಕೆಯಾಗುವ ರೋಡ್ ರೋಲರ್ ಹರಿದು ಚಾಲಕನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಪ್ಪಳದ ಗಂಗಾವತಿ ನಗರದ ಹೊರ ವಲಯ ಸಂಗಪುರ ರಸ್ತೆಯಲ್ಲಿರುವ ಆಂಜನೇಯ ಕಣಿವೆ ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ನಗರದ ನೀಲಕಂಠೇಶ್ವರ ವೃತ್ತದ ಪ್ರದೇಶದಲ್ಲಿ ವಾಸಿಸುವ ಸುರೇಶ್ ಐಲಿ (35) ಎಂದು ಗುರುತಿಸಲಾಗಿದೆ. ಸಂಗಪುರದಿಂದ ಗಂಗಾವತಿಗೆ ಬರುವಾಗ ಕಣಿವೆ ಆಂಜನೇಯ ದೇಗುಲದ ಬಳಿಯ ಇಳಿಜಾರು ಪ್ರದೇಶದಲ್ಲಿ ಸುರೇಶ್ ಮೊಬೈಲ್ ಅಲ್ಲಿ ಮಾತನಾಡಿಕೊಂಡು ವಾಹನವನ್ನು ನ್ಯೂಟ್ರಲ್ ಮಾಡಿದ್ದಾರೆ. ಈ ವೇಳೆ ವಾಹನದ ನಿಯಂತ್ರಣ ಸಿಗದ ಹಿನ್ನೆಲೆ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದೆ. ಆಗ ಗಾಬರಿಗೊಂಡ ಸುರೇಶ್ ಬೀಳುವ ಆತಂಕದಿಂದ ವಾಹನದಿಂದ ಜಿಗಿದಿದ್ದಾರೆ.ಅವರು ಜಿಗಿದ ಕೂಡಲೇ ರೋಲರ್ ಅವರ ಹರಿದು ಈ ಘಟನೆ ಸಂಭವಿಸಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


