ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂಥ ಕಳ್ಳರು ಇಲ್ಲ ಎನ್ನುವ ಹಾಗಿಲ್ಲ ನೋಡಿ. ಬಿಡಿ ಭಾಗಗಳನ್ನು ಸೆಕೆಂಡ್‍ನಲ್ಲಿ ಕದಿಯುವ ಖತರ್ನಾಕ್ ಕಳ್ಳರಿದ್ದಾರೆ.ಮನೆ ಹೊರಗೆ ನಿಲ್ಲಿಸ್ತಿದ್ದ ಕಾರ್ ಗಳ ಸಿಸ್ಟಂ, ಟೈರ್ ಕದ್ದು ಎಸ್ಕೇಪ್ ಆಗುತ್ತಿದ್ದರು. ಇದೀಗ ವಾಹನಗಳ ಬ್ಯಾಟರಿಗಳನ್ನು ಕದಿಯುತ್ತಿದ್ದಾರೆ. ಮನೆಯ ಹೊರಗೆ ನಿಲ್ಲಿಸಿದ್ದ ಲಗೇಜ್ ಆಟೋದ ಬ್ಯಾಟರಿ ಕದಿಯೋ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.ಶರಣಯ್ಯ ಎಂಬುವರು ದಿನನಿತ್ಯದಂತೆ ತಮ್ಮ ಆಟೋವನ್ನು ಮನೆಯ ಹೊರಗೆ ನಿಲ್ಲಿಸಿದ್ದರು. ಮಧ್ಯರಾತ್ರಿ ಎಂಟ್ರಿ ಕೊಟ್ಟ ಬ್ಯಾಟರಿ ಕಳ್ಳ ಬೈಕ್‍ನಲ್ಲಿ ಬಂದು ಕೈ ಚಳಕ ತೋರಿಸಿದ್ದಾನೆ. ಆಟೋದ ಲಾಕ್ ಮುರಿದು ಬಳಿಕ ಬ್ಯಾಟರಿ ಬಿಚ್ಚಿಕೊಂಡು ತನ್ನ ಬೈಕ್‍ನಲ್ಲಿ ವಾಪಸ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಬ್ಯಾಟರಿ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನೀವು ಏನಾದರೂ ವೆಹಿಕಲ್ ಹೊರಗೆ ಪಾರ್ಕ್ ಮಾಡುತ್ತಿದ್ದರೆ ಹುಷಾರಾಗಿರಿ.Sign in to your account
Username or Email Address


Password

 Remember Me


