ಬೆಂಗಳೂರು: ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ್ದ ನಟ ರಘು ಭಟ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಸನ್ಮಾನಿ ಅಭಿನಂದಿಸಿದರು.ನಟ ರಘು ಭಟ್  ಕುಟುಂಬದೊಂದಿಗೆ ಮನೆ ಹೋಗುತ್ತಿರುವಾಗ ದರೋಡೆಕೊರರಿಬ್ಬರು ಕಾರು ಚಾಲಕನ ಬಳಿ ಮೊಬೈಲ್ ಹಾಗೂ ಚೈನ್ ಪಡೆದು ಪರಾರಿಯಾಗುತ್ತಿದ್ದರು. ಕಿರುಚಾಡುತ್ತಿದ್ದ ಚಾಲಕ ಧ್ವನಿ ಕೇಳಿಸಿಕೊಂಡ ರಘು ಅವರು  ದರೋಡೆಕೋರರನ್ನು ಚೇಸ್ ಮಾಡಲು ಆರಂಭಿಸಿದಾಗ, ದರೋಡೆಕೋರರು ಬೈಕ್ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದರು. ಸುಮಾರು 2 ಕಿ.ಮೀ ಚೇಸ್ ಮಾಡಿದ ಬಳಿಕ  ಭಾರತಿ ನಗರದ ಸೇಂಟ್ ಜಾನ್ಸ್ ವೃತ್ತದಲ್ಲಿ ರಘು, ದರೋಡೆಕೋರರನ್ನು ಹಿಡಿದಿದ್ದರು. ನಂತರ ಇಬ್ಬರನ್ನೂ, ಹಲಸೂರು ಪೊಲೀಸರಿಗೆ ಒಪ್ಪಿಸಿದ್ದರು.ಬಂಧಿತ ಆರೋಪಿಗಳಲ್ಲಿ ಖಾಜಾ ಮೋಹಿನ್ ವಿರುದ್ಧ ದರೋಡೆ, ಸರ ಕಳ್ಳತನ, ಕಳ್ಳತನ ಸೇರಿದಂತೆ ಒಟ್ಟು 27 ಪ್ರಕರಣಗಳಿವೆ. ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲು ಆದೇಶಿಸಲಾಗಿದೆ. ಮತ್ತೊಬ್ಬ ಆರೋಪಿ ಅಬ್ದುಲ್ ಮೋಹಿಮ್‍ನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ದರೋಡೆ ಮಾಡಿದ್ದ ಮೊಬೈಲ್, ಹಣ, ಚೈನ್‍ಗಳನ್ನು ಪೊಲೀಸರು ಚಾಲಕನಿಗೆ ತಲುಪಿಸಿದ್ದಾರೆ.Sign in to your account
Username or Email Address


Password

 Remember Me


