ಬೆಂಗಳೂರು: ಸಂಜನಾ ಮತ್ತು ವಂದನಾ ಕಿರಿಕ್ ಪಾರ್ಟಿ ಕೇಸ್ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಇಂದು ಪೊಲೀಸ್ ಠಾಣೆಗೆ ಸಂಜನಾ ಗಲ್ರಾನಿ ದೂರಿಗೆ ಪ್ರತಿಕ್ರಿಯೆ ನೀಡಿದ ವಂದನಾ ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.ಸಂಜನಾ ದೂರನ್ನು ಕೊಟ್ಟರೆ ಕೊಡಲಿ. ನಿಜವಾಗಿ ಹೇಳಬೇಕು ಅಂದರೆ ಅವಳಿಗೆ ದೂರು ನೀಡಲು ಯಾವುದೇ ವಿಚಾರ ಇಲ್ಲ. ದೂರು ಕೊಡಬೇಕು ಅಂದಿದ್ರೆ ಅವತ್ತೇ ದೂರನ್ನು ಕೊಡಬೇಕಿತ್ತು. ಈಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರು ನೀಡುವುದಕ್ಕೆ ಓಡಾಡುತ್ತಿದ್ದಾಳೆ ಎಂದು ವಂದನಾ ಕಿಡಿಕಾರಿದರು. ಇದನ್ನು ಓದಿ: ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?ಹಲ್ಲೆ ಮಾಡಿದ್ದು ಅವಳು ಕಿತ್ತಾಡಿದ್ದು ಅವಳು, ನಾನು ದೂರು ಕೊಟ್ಟೆ ಎನ್ನುವ ಕಾರಣಕ್ಕೆ ಸಂಜನಾ ಕೂಡ ದೂರನ್ನು ನೀಡುತ್ತಿದ್ದಾಳೆ. ಈ ವೇಳೆ ನಾನು ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಂದನಾ, ನಾನು ಮಾಡದ ತಪ್ಪಿಗೆ ಸಂಜನಾ ತುಂಬಾ ಚೀಪ್ ಆಗಿ ಮಾತನಾಡುತ್ತಿದ್ದಾಳೆ. ನಾನು ಅವಳ ರೀತಿಯಲ್ಲ ಎಂದು ತಿಳಿಸಿದ್ದಾರೆ.Sign in to your account
Username or Email Address


Password

 Remember Me


