ಬೆಂಗಳೂರು: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಎಲ್ ಹನಿಟ್ರ್ಯಾಪ್ ಪ್ರಕರಣದಲ್ಲಿ ನಿಮ್ಮ ಮತ್ತು ವಂದನಾ ಜೈನ್ ಹೆಸರು ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಕೆಪಿಎಲ್ ಅಂದ್ರೇನು ಗೊತ್ತಿಲ್ಲ. ಕೆಪಿಎಲ್ ಕರ್ನಾಟಕ ಪ್ರೀಮಿಯರ್ ಲೀಗ್ ಅಂತಾ ಗೊತ್ತಾಗಿದ್ದೇ ಇವತ್ತು ಎಂದು ಹೇಳಿದ್ದಾರೆ.ನನಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೊತ್ತು. ಕೆಪಿಎಲ್ ಮೂಲಕ ವಂದನಾ ನನಗೆ ಪರಿಚಯವಿಲ್ಲ. ಆಕೆಯ ಜೊತೆ ಯಾವ ಗೆಳೆತನವೂ ನನಗೆ ಇಲ್ಲ. ಆಕೆ ನಿನ್ನ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ನನಗೆ ಜೀವ ಭಯವಿದೆ ಎಂದು ಸಂಜನಾ ತಿಳಿಸಿದ್ದಾರೆ.ಇದೇ ವೇಳೆ ವಿಸ್ಕಿ ಬಾಟೆಲ್ ನಲ್ಲಿ ನಾನು ಹೊಡೆದ ಎಂದು ಹೇಳಿದವರು ಯಾರು? ಯಾವ ಆಧಾರ ಇದೆ ನಿಮ್ಮ ಬಳಿ? ನಾನು ಎಲ್ಲಿ ವಿಸ್ಕಿ ಬಾಟಲ್‍ನಿಂದ ಹೊಡೆದೆ. ನಿಮ್ಮ ಬಳಿ ಏನಾದರೂ ಸಿಸಿಟಿವಿ ಇದ್ಯಾ ಎಂದರು. ಇದಕ್ಕೆ ಸಂಜನಾ ಗಲ್ರಾಣಿ ವಿಸ್ಕಿ ಬಾಟೆಲ್ ನಲ್ಲಿ ಹೊಡೆದರು ಅಂತಾ ವಂದನಾರೇ ಹೇಳಿದ್ದು ಎಂದು ಮಾಧ್ಯಮದವರು ಹೇಳಿದಾಗ, ನಾನೇನು ಕುಡಿದು ತೂರಾಡುತ್ತಿದ್ನಾ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪನಾನು ಗಲಾಟೆಯಾದಾಗ ಕುಡಿದಿರಲಿಲ್ಲ. ಇನ್ನು ವಿಸ್ಕಿ ಬಾಟೆಲ್ ನಿಂದ ಹೊಡೆಯೋದು ಎಲ್ಲಿಂದ ಬಂತು? ನಾನು ನನ್ನ ಕಾರ್ ಬಳಿ ಹೋಗುವಾಗ ತೂರಾಡ್ಕೊಂಡು ಹೋಗುವ ವೀಡಿಯೊವನ್ನು ಅವರೇ ಬಿಟ್ಟಿದ್ದಾರಲ್ಲ. ಸ್ಟಿಫ್ ಆಗಿ ನನ್ನ ಕಾರಿಗೆ ಹೋಗಿದ್ದೇನೆ. ಆಕೆಗೆ ಪ್ರಚಾರದ ಹುಚ್ಚಿಂದ ನನ್ನ ಮೇಲೆ ಇಲ್ಲಸಲ್ಲದ ದೂರು ಹೊರಿಸಿದ್ದಾಳೆ ಎಂದು ವಂದನಾ ಜೈನ್ ವಿರುದ್ಧ ಗಲ್ರಾನಿ ಗರಂ ಆಗಿದ್ದಾರೆ.Sign in to your account
Username or Email Address


Password

 Remember Me


