ಶಿವಮೊಗ್ಗ: ಕಾರು ಹಾಗೂ ನಗದನ್ನು ಕಳವು ಮಾಡಿದ್ದ ಚಾಲಾಕಿ ಕಳ್ಳನನ್ನು ಒಂದೇ ವಾರದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಭುಯಾರ್ ಗ್ರಾಮದ ನಿವಾಸಿ ಆಕಾಶ್ ಸಿಂದಗಿ ಬಂಧಿತ ಆರೋಪಿ. ಶಿವಮೊಗ್ಗದ ನೆಹರು ರಸ್ತೆಯ ಖಾಸಗಿ ಲಾಡ್ಜ್ ನಲ್ಲಿ ವಾಸ್ತವ್ಯ ಮಾಡಿದ್ದ ಆರೋಪಿ, 12 ಲಕ್ಷ ರೂ. ಮೌಲ್ಯದ ಕಾರು ಕಳ್ಳತನ ಮಾಡಿದ್ದನು.ಆರೋಪಿ ಆಕಾಶ್ ಸಿಂದಗಿ ಡಿಸೆಂಬರ್ 22 ರಂದು ನಗರದ ಕೃಷಿನಗರದ ಪ್ರದೀಪ್ ಅವರ ಕಾರು ಮತ್ತು ಅದರಲ್ಲಿದ್ದ 41 ಸಾವಿರ ರೂ. ನಗದು ಕಳವು ಮಾಡಿದ್ದನು. ಘಟನೆ ಕುರಿತು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ ಪಿ.ಉಮೇಶನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.Sign in to your account
Username or Email Address


Password

 Remember Me


