ಬೆಂಗಳೂರು: ಫಾರಿನ್ ಟ್ರಿಪ್‍ಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಸಿಕ್ಕಾಪಟ್ಟೆ ನಂಟು. ಅದರಲ್ಲೂ ಸಿಂಗಾಪುರ್ ಅಂದ್ರೆ ಹೆಚ್‍ಡಿಕೆಗೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಸಿಂಗಾಪುರ್ ಗೆ ಹೋಗುತ್ತಲೇ ಇರುತ್ತಾರೆ. ಈಗ ಮತ್ತೆ ಕುಮಾರಸ್ವಾಮಿ ಸಿಂಗಾಪುರ್ ಗೆ ತೆರಳಿದ್ದಾರೆ. ಹೊಸ ವರ್ಷ ಸೆಲೆಬ್ರೆಷನ್ ಗಾಗಿ ಕುಮಾರಸ್ವಾಮಿ ಫ್ಯಾಮಿಲಿ ಸಮೇತ ಸಿಂಗಾಪುರ್ ಗೆ ಹಾರಿದ್ದಾರೆ.ಕಳೆದ ಎರಡು-ಮೂರು ವರ್ಷಗಳಿಂದ ಕುಮಾರಸ್ವಾಮಿ ಹೊಸ ವರ್ಷವನ್ನು ಸಿಂಗಾಪುರ್ ನಲ್ಲಿಯೇ ಆಚರಣೆ ಮಾಡುತ್ತಿದ್ದಾರೆ. ಕಳೆದ ವರ್ಷ ಸಿಎಂ ಆಗಿದ್ದಾಗಲೂ ಅವರು ಸಿಂಗಾಪುರ್ ಗೆ ಹೋಗಿದ್ರು. ಈಗ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸ್ವಲ್ಪ ರಾಜಕೀಯ ಚಟುವಟಿಕೆಯಿಂದ ಹೆಚ್‍ಡಿಕೆ ದೂರ ಉಳಿದಿದ್ದಾರೆ. ಹೀಗಾಗಿ ಸಿಂಗಾಪುರ್ ಹಾರಿದ್ದಾರೆ.ಪತ್ನಿ ಅನಿತಾ, ಮಗ ನಿಖಲ್, ಕೆಲ ಆಪ್ತ ಜೆಡಿಎಸ್ ನಾಯಕರು ಕೂಡ ಹೆಚ್‍ಡಿಕೆ ಜೊತೆ ತೆರಳಿದ್ದಾರೆ ಅಂತ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬ ಆಚರಣೆಗೆ ಗೋವಾಕ್ಕೆ ಹೋಗಿದ್ರು. ಈಗ ಹೊಸ ವರ್ಷವನ್ನು ಸೆಲೆಬ್ರೇಷನ್ ಮಾಡೋಕೆ ಸಿಂಗಾಪುರ್ ಗೆ ಹೋಗಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


