ಹಾವೇರಿ: ಹಣ ಕಳೆದುಕೊಂಡ ಪ್ರಯಾಣಿಕನಿಗೆ ಸಿಕ್ಕ ಹಣವನ್ನು ವಾಪಸ್ ನೀಡುವ ಮೂಲಕ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.ಶುಕ್ರವಾರ ಹಾವೇರಿ ತಾಲೂಕಿನ ಮರಡೂರ ಗ್ರಾಮದ ಸ್ವಾಮಿ ಎಂಬ ವ್ಯಕ್ತಿಯು ಹಾವೇರಿಯಿಂದ ಬೆಳವಗಿ ಮಾರ್ಗದಲ್ಲಿ ಸಂಚರಿಸುವ ಬಸ್‍ನಲ್ಲಿ ನಾಲ್ಕು ಸಾವಿರ ಹಣವನ್ನು ಕಳೆದುಕೊಂಡಿದ್ದರು.ಅದೇ ಬಸ್ ನಲ್ಲಿ ಕಂಡಕ್ಟರ್ ಆಗಿದ್ದ ಹಾಲಗಿ ಗ್ರಾಮದ ಶ್ರೀನಿವಾಸ ಅವರು, ಬಸ್ ನಲ್ಲಿ ಸಿಕ್ಕಿದ್ದ ಹಣವನ್ನು ಕಳೆದುಕೊಂಡ ವ್ಯಕ್ತಿಗೆ ನೀಡುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ. ನಿರ್ವಾಹಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಮಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.Sign in to your account
Username or Email Address


Password

 Remember Me


