ರಾಯಚೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಾರಿಗೆ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿ ಮಿತಿ ಮೀರಿದ ಲಂಚ ಹಾಗೂ ಬ್ರೋಕರ್ ಗಳ ಹಾವಳಿ ಕುರಿತ ದೂರು ಹಿನ್ನೆಲೆ ದಾಳಿ ನಡೆಸಲಾಗಿದೆ. ಎಸಿಬಿ ಡಿಎಸ್‍ಪಿ ಸಂತೋಷ್ ಬನ್ನಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದೆ.ಬಳ್ಳಾರಿ, ಬೀದರ್, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ 5 ಜಿಲ್ಲೆಗಳ ಒಟ್ಟು 30 ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಮಧ್ಯಾಹ್ನ ಒಂದು ಗಂಟೆಯಿಂದ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ಆರಂಭವಾಗಿದೆ. ದಾಳಿ ಸಮಯದಲ್ಲಿ ಕಚೇರಿ ಒಳಗಿದ್ದ ಬ್ರೋಕರ್‍ ಗಳು ಹಾಗೂ ಸಾರ್ವಜನಿಕರನ್ನ ಎಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.ಆರ್.ಟಿ.ಓ ಕಚೇರಿಯಲ್ಲಿ ಪ್ರತಿಯೊಂದಕ್ಕೂ ಲಂಚ ಕೊಡಬೇಕು ಹಾಗೂ ಬ್ರೋಕರ್ ಗಳು ಇಲ್ಲದಿದ್ದರೆ ಯಾವುದೇ ಕೆಲಸಗಳು ಆಗುವುದಿಲ್ಲ ಅನ್ನೋ ಮಟ್ಟಿಗೆ ಪರಸ್ಥಿತಿಯಿದೆ ಎಂದು ಬಂದಿದ್ದ ದೂರುಗಳ ಹಿನ್ನೆಲೆ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.Sign in to your account
Username or Email Address


Password

 Remember Me


