ರಾಯಚೂರು: ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಸಹ ಪ್ರತಿಭಟನೆಗಳು ನಡೆದವು. ನಗರದ ಶಾಹೀ ಜಾಮೀಯಾ ಮಸೀದಿಯಿಂದ ಮೆರವಣಿಗೆ ಬಂದ ಪ್ರತಿಭಟನಾಕಾರರು ತೀನ್ ಕಂದಿಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಮಾಜ್ ಬಳಿಕ ಪ್ರತಿಭಟನೆಗೆ ಮುಂದಾದ ಮುಸ್ಲಿಂ ಸಂಘಟನಕಾರರನ್ನ ಪೊಲೀಸರು ಬಂಧಿಸಿ ಕರೆದೊಯ್ದರು.ಪ್ರತಿಭಟನೆಗೆ ಅವಕಾಶ ಮಾಡಿಕೊಡದ ಪೋಲಿಸರು ಹೋರಾಟ ನಡೆಸದಂತೆ ಮುನ್ನೆಚ್ಚರಿಕೆ ನೀಡಿದ್ದರು. ಆದರೂ ಹೋರಾಟಗಾರರು ಪ್ರತಿಭಟನೆಗಿಳಿದ ಹಿನ್ನೆಲೆಯಲ್ಲಿ ಸುಮಾರು 20 ಜನರನ್ನು ಬಂಧಿಸಿದರು. ಸ್ಥಳದಲ್ಲಿ ಸೇರಿದ್ದ ಉಳಿದ ಪ್ರತಿಭಟನಾಕಾರರನ್ನು ಪೋಲಿಸರು ಚದುರಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿರವಾರ ಪಟ್ಟಣದಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಸ್ಲಿಂ ಹಾಗೂ ದಲಿತಪರ ಸಂಘಟನೆಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದವು. ಧರ್ಮಾಧಾರಿತ ಕಾಯ್ದೆ ಬೇಡ ಎಂದು ಘೋಷಣೆ ಕೂಗಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.Sign in to your account
Username or Email Address


Password

 Remember Me


