ಬೆಂಗಳೂರು: ನಟಿ ರಚಿತಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಹೆಚ್ಚಾಗಿ ಸ್ಟಾರ್ ನಟರ ಜೊತೆಯೇ ಅಭಿಮಾನಿಸುವ ಮೂಲಕ ಲಕ್ಕಿ ನಟಿ ಎನ್ನಿಸಿಕೊಂಡಿದ್ದರು. ಇದೀಗ ಸ್ವತಃ ಅವರೇ ನಾನು ಲಕ್ಕಿ ಎಂದು ನನಗೆ ಗೊತ್ತಿದೆ ಎಂದು ಹೇಳಿಕೊಂಡಿದ್ದಾರೆ.ರಚಿತಾ ಇನ್‌ಸ್ಟಾಗ್ರಾಂ “ನಾನು ಲಕ್ಕಿ ಎಂದು ನನಗೆ ಗೊತ್ತಿದೆ” ಎಂದು ಬರೆದುಕೊಂಡಿದ್ದಾರೆ. ರಚಿತಾ ತೆಲುಗಿನ ಸೂಪರ್ ಸ್ಟಾರ್ ಎನ್ನಿಸಿಕೊಂಡಿರುವ ಹಿರಿಯ ನಟ ರಾಜೇಂದ್ರ ಪ್ರಸಾದ್‍ರನ್ನು ಭೇಟಿ ಮಾಡಿದ್ದಾರೆ. ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ರಚಿತಾ “ನಾನು ಲಕ್ಕಿ ಎಂದು ನನಗೆ ಗೊತ್ತಿದೆ” ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಾಜೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿರುವುದು ನನ್ನ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ.https://www.instagram.com/p/B6fiIheAdJI/ರಾಜೇಂದ್ರ ಪ್ರಸಾದ್ ಇದುವರೆಗೆ 240ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್‍ನ ಜನಪ್ರಿಯ ನಟ ಎನ್ನಿಸಿಕೊಂಡಿದ್ದಾರೆ. ರಚಿತಾ ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾಗೆ ‘ಸೂಪರ್ ಮಚ್ಚಿ’ ಟೈಟಲ್ ಇಡಲಾಗಿದೆ.ಚಿರಂಜೀವಿ ಅಳಿಯ ಕಲ್ಯಾಣ್ ದೇವ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ತಂದೆ ಮಗಳ ನಡುವಿನ ಭಾವನಾತ್ಮಕ ಕಥೆಯಾಗಿದೆ. ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬರಲಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.https://www.instagram.com/p/B5-TWyZgqEG/Sign in to your account
Username or Email Address


Password

 Remember Me


