ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಿಂದ ಕುಶಾಲನಗರ ಮಾರ್ಗವಾಗಿ ಗೂಡ್ಸ್ ಜೀಪಿನಲ್ಲಿ ಅಕ್ರಮವಾಗಿ ಬೀಟೆ ನಾಟಾಗಳನ್ನು ಸಾಗಿಸುತ್ತಿರುವ ವಾಹನ ಹಾಗೂ ಮರದ ನಾಟಾಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಸಿದ್ದಾಪುರ ಭಾಗದಿಂದ ಗೂಡ್ಸ್ ಜೀಪಿನಲ್ಲಿ (ಕೆಎ 18 ಬಿ 9888) ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ತುಂಬಿಸಿಕೊಂಡು ಕುಶಾಲನಗರದತ್ತ ಬೆಳಗ್ಗಿನ ಜಾವ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಬಗ್ಗೆ ಖಚಿತ ಸುಳಿವಿನ ಮೇರೆಗೆ ಕುಶಾಲನಗರ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಸಿಬ್ಬಂದಿ ವಾಹನವನ್ನು ಹಿಂಬಾಲಿಸಿಕೊಂಡು ಬೆನ್ನಟ್ಟಿ ಸೆರೆಹಿಡಿಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ನಂಜರಾಯಪಟ್ಟಣ ಗ್ರಾಮದ ದುಬಾರೆ ಬಳಿ ಜೀಪು ಚಾಲಕ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ದುಬಾರೆ ಗದ್ದೆಯಲ್ಲಿ ನಿಲ್ಲಿಸಿ ಆರೋಪಿ ಪರಾರಿಯಾಗಿದ್ದಾನೆ.ಅರಣ್ಯ ಸಿಬ್ಬಂದಿ ಜೀಪು ಹಾಗೂ 1.50 ಲಕ್ಷ ಮೌಲ್ಯದ ಮರ ಸೇರಿದಂತೆ ಒಟ್ಟು ರೂ.6 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


 Advertisement 




 Advertisement 






 Advertisement 




Sign in to your account
Username or Email Address


Password

 Remember Me


