ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನನ್ನ ಐದಾರು ಮಂದಿ ದುಷ್ಕರ್ಮಿಗಳು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಶ್ರೀರಾಂಪುರದ ಆರ್ ಜೆ ನಗರದ 81 ಬಸ್ ಸ್ಟ್ಯಾಂಡ್  ಬಳಿ ನಡೆದಿದೆ.ದೀಪಾಂಜಲಿ ನಗರದ ನಿವಾಸಿ ಮಂಜುನಾಥ್ (25 ) ಮೃತ ದುರ್ದೈವಿ. ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ ಮಂಜುನಾಥ್ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಶ್ರೀರಾಂಪುರಕ್ಕೆ ಬಂದಿದ್ದನು. ಈ ನಡುವೆ ದುಷ್ಕರ್ಮಿಗಳು ಮಾತನಾಡಬೇಕೆಂದು ಮಂಜುನಾಥ್ ನನ್ನ ಕರೆದೊಯ್ದು ಗಲಾಟೆ ಮಾಡಿದ್ದಾರೆ. ಹೀಗಿರುವಾಗ್ಲೇ ಹಿಂಬದಿಯಿಂದ ದುಷ್ಕರ್ಮಿಯೊಬ್ಬ ಮಂಜುನಾಥ್ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ತಿವಿದಿದ್ದಾನೆ. ಕೂಡಲೇ ಮಂಜುನಾಥ್ ಅಲ್ಲಿಂದ ಓಡಲು ಯತ್ನಿಸಿದ್ದು, ಮತ್ತೊಬ್ಬ ಲಾಂಗ್ ನಿಂದ ತಲೆಗೆ ಹೊಡೆದಿದ್ದಾನೆ.ಇದರಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಣಕಾಸಿನ ವಿಚಾರಕ್ಕೆ ಮಂಜುನಾಥ್ ನನ್ನ ಶ್ರೀರಾಂಪುರ ಪ್ರಕಾಶ್ ನಗರದ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮತ್ತು ಶ್ರೀರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


