ಚಿಕ್ಕೋಡಿ(ಬೆಳಗಾವಿ): ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ ಶ್ರೀರಾಮ ಸೇನಾ ಅಧ್ಯಕ್ಷ ವ್ಯಕ್ತಿಯೋರ್ವನನ್ನ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಥಳಿತಕ್ಕೊಳಗಾದವನನ್ನು ಹುಕ್ಕೇರಿ ಪಟ್ಟಣ ನಿವಾಸಿ ಮುಬಾರಕ ಎಂದು ಗುರುತಿಸಲಾಗಿದೆ. ಈತ 17 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಶಿವರಾಜ್ ನಾಯಿಕ ಹಲ್ಲೆ ಮಾಡಿದ್ದಾನೆ.ಈ ಘಟನೆ ನಡೆದು ಒಂದು ವಾರಗಳ ಬಳಿಕ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಒಂದು ವಾರದ ಹಿಂದೆ ಹಲ್ಲೆ ಬಳಿಕ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾದರೂ ಹಲ್ಲೆ ಮಾಡಿದವರು ಹಾಗೂ ಹಲ್ಲೆ ಮಾಡಿಸಿಕೊಂಡವರು ರಾಜಿ ಮಾಡಿಕೊಂಡ ಕಾರಣ ಪ್ರಕರಣ ದಾಖಲಾಗಿರಲಿಲ್ಲ.ಬಾಲಕಿಯ ತಾಯಿಯಿಂದ ರಾಜಿ ಸಂಧಾನ ಬರೆಸಿಕೊಂಡು ಹುಕ್ಕೇರಿ ಪೊಲೀಸರು ಕಳುಹಿಸಿಕೊಟ್ಟಿದ್ದರು. ಆದರೆ ಇದೀಗ ವಿಡಿಯೋ ವೈರಲ್ ಆಗಿರುವ ಕಾರಣ ಪೊಲೀಸರು ಹಲ್ಲೆ ಮಾಡಿರುವ ಆರೋಪದಡಿ ಸ್ವಯಂಪ್ರೇರಿತ ದೂರು ದಾಖಲಿಸಲು ಮುಂದಾಗಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


