ಚಿಕ್ಕಬಳ್ಳಾಪುರ: ಸೂರ್ಯ ಗ್ರಹಣದ ಎಫೆಕ್ಟ್ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೂ ತಟ್ಟಿದ್ದು ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಬಾರದೆ ಕಚೇರಿಗಳೆಲ್ಲವೂ ಖಾಲಿ ಖಾಲಿ ಹೊಡೆದಿದ್ದವು.ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಸಾರ್ವಜನಿಕರಿಲ್ಲದೇ ಭಣಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗ್ರಹಣ ಭೀತಿ ಹಿನ್ನೆಲೆ ಮನೆಯಿಂದ ಜನ ಹೊರ ಹಾರದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದತ್ತ ಸಾರ್ವಜನಿಕರು ಸುಳಿದಾಡಲೇ ಇಲ್ಲ. ಕೇವಲ ಬೆರಳಣಿಕೆಯಷ್ಟು ಕೆಲ ಸಾರ್ವಜನಿಕರು ಗ್ರಹಣ ಮುಗಿದ ತರುವಾಯ ಮಧ್ಯಾಹ್ನ ನಂತರ ಆಗಮಿಸಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರು.ನಿನ್ನೆ ಕ್ರಿಸ್ ಮಸ್ ರಜೆ ಇಂದು ಗ್ರಹಣದ ಹಿನ್ನೆಲೆ ಬಹುತೇಕ ಅಧಿಕಾರಿ ಸಿಬ್ಬಂದಿ ಕೂಡ ರಜೆ ಹಾಕಿದ್ದು ಕಚೇರಿಗಳಿಗೆ ಬಂದಿರಲಿಲ್ಲ. ಒಂದು ಕಡೆ ಕ್ರಿಸ್ ಮಸ್ ರಜೆಯ ಎಫೆಕ್ಟ್ ಮತ್ತೊಂದೆಡೆ ಗ್ರಹಣದ ಭೀತಿಯಿಂದ ಸಾರ್ವಜನಿಕರಿಲ್ಲದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನವೇ ಸಂಪೂರ್ಣ ಬಿಕೋ ಎನ್ನುವಂತಾಗಿತ್ತು.Sign in to your account
Username or Email Address


Password

 Remember Me


