ಯಾದಗಿರಿ: ಹೋಳಿ ಹುಣ್ಣಿಮೆಗೆ ಅಥವಾ ಯುಗಾದಿ ಹಬ್ಬ ಸಂದರ್ಭದಲ್ಲಿ ಬಣ್ಣದೊಕಳಿ ಆಡುವುದು ಸಾಮಾನ್ಯ. ಆದರೆ ಜಿಲ್ಲೆಯ ಶಹಪುರ ತಾಲೂಕಿನ ಸಗರ ಗ್ರಾಮದಲ್ಲಿ ಎಳ್ಳು ಅಮಾವಾಸ್ಯೆಯಂದು ಸಹ ಓಕಳಿ ಆಡಲಾಗುತ್ತದೆ. ಆದರೆ ಇದು ಬಣ್ಣದ ಓಕಳಿಯಲ್ಲ, ನೀರಿನ ಓಕಳಿ.ಈ ಗ್ರಾಮದಲ್ಲಿ ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಆಚರಣೆ ಗ್ರಾಮಸ್ಥರಿಗೆ ಬಹು ದೊಡ್ಡ ಹಬ್ಬವಾಗಿದೆ. ಈ ಹಬ್ಬದ ಇನ್ನೊಂದು ವಿಶೇಷ ಎಂದರೆ ನೀರಿನ ಓಕಳಿ ಆಡಲು ಚರ್ಮ ಚೀಲ ಉಪಯೋಗಿಸಲಾಗುತ್ತದೆ.ಉತ್ತರ ಕರ್ನಾಟಕದಲ್ಲಿ ಎಳ್ಳು ಅಮವಾಸ್ಯೆ ಎಂದರೆ ಭೂಮಿ ತಾಯಿಗೆ ಬಾಗಿನ ಕೊಡುವ ಹಬ್ಬವೆಂದೇ ಪ್ರಸಿದ್ಧ. ಈ ದಿನ ಸಗರ ಗ್ರಾಮದಲ್ಲಿ ರೈತಾಪಿ ವರ್ಗ ಇನ್ನಷ್ಟು ವಿಶೇಷವಾಗಿ ಈ ಹಬ್ಬವನ್ನು ಆಚರಿಸುತ್ತದೆ. ಗ್ರಾಮದ ಹನುಮಂತ ದೇವರ ಮೂರ್ತಿಯನ್ನು ಗಂಗಾ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಗಂಗಾ ಪೂಜೆಯ ಬಳಿಕ ಮತ್ತೆ ಮರಳಿ ದೇವಸ್ಥಾನಕ್ಕೆ ದೇವರ ಮೂರ್ತಿಯನ್ನು ಕರೆತರುವಾಗ, ಈ ನೀರೋಕಳಿಯನ್ನು ಆಡಲಾಗುತ್ತದೆ. ಪ್ರಾಣಿಗಳ ಚರ್ಮದಿಂದ ಮಾಡಿದ ಚೀಲದಲ್ಲಿ ನೀರು ತುಂಬಿಕೊಂಡು ಮಾರ್ಗದ ಉದ್ದಕ್ಕೂ ಓಕಳಿ ಆಡುತ್ತಾರೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.Sign in to your account
Username or Email Address


Password

 Remember Me


