ಧಾರವಾಡ: ನೆರೆ ಸಂತ್ರಸ್ತರ ಮನೆಗಳ ಪರಿಶೀಲನೆಗೆಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಅಲ್ಲಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತ ಹೋಗುತ್ತಿದ್ದರು.ಈ ವೇಳೆ ಮನೆಯ ಕಟ್ಟೆಯ ಮೇಲೆ ಬುಕ್ ಹಿಡಿದು ಜಿಲ್ಲಾಧಿಕಾರಿಗಳು ಹೋಗುವುದನ್ನು ನೋಡುತ್ತ ನಿಂತಿದ್ದ ಹುಡುಗನೊಬ್ಬನನ್ನು ಕಂಡ ಜಿಲ್ಲಾಧಿಕಾರಿಗಳು, ಆ ಹುಡುಗನ ಬಳಿ ಹೋಗಿ ಎಷ್ಟನೇ ತರಗತಿ ಓದುತ್ತಿದ್ದೀಯ ಎಂದು ಮಾತನಾಡಿಸಿ ಆತ ಹಿಡಿದಿದ್ದ ಪುಸ್ತಕವನ್ನು ತೆಗೆದುಕೊಂಡು ನೋಡಲಾರಂಭಿಸಿದರು.ಜಿಲ್ಲಾಧಿಕಾರಿಯವರು ಪುಸ್ತಕವನ್ನು ಪಡೆದುಕೊಳ್ಳುತ್ತಿದ್ದಂತೆ ಆ ವಿದ್ಯಾರ್ಥಿ ಅಲ್ಲಿಂದ ಕಾಲ್ಕಿತ್ತ. ಜಿಲ್ಲಾಧಿಕಾರಿಗಳು ಆಶ್ಚರ್ಯಗೊಂಡು ಆ ಬುಕ್ ತೆಗೆದು ನೋಡುತ್ತಿದ್ದಂತೆ ಆ ಬುಕ್ ನಲ್ಲಿ ಆ ಹುಡುಗ ಯಾರಿಗೋ ಐ ಲವ್ ಯೂ ಎಂದು ಬರೆದಿದ್ದು, ಕಂಡುಬಂದಿದೆ. ಇದನ್ನು ನೋಡಿ ದಂಗಾದ ಜಿಲ್ಲಾಧಿಕಾರಿಗಳು, ನೋಡಿ ಇಲ್ಲಿ ಎಂದು ಉಪವಿಭಾಗಾಧಿಕಾರಿಗಳಿಗೂ ಅದನ್ನು ತೋರಿಸಿದರು.ಆದರೆ ಆ ಬಾಲಕ ಅವರ ಕೈಗೆ ಸಿಗದೇ ಪರಾರಿಯಾಗಿದ್ದ. ಜಿಲ್ಲಾಧಿಕಾರಿಗಳು ನಸುನಕ್ಕು ಅಲ್ಲಿಂದ ಹೋಗಿದ್ದಾರೆ. ಜಿಲ್ಲಾಧಿಕಾರಿ ಆ ಪುಸ್ತಕವನ್ನು ತನ್ನ ಕೈಯಲ್ಲೇ ಹಿಡಿದುಕೊಂಡು ಹೋಗಿದ್ದಾರೆ.Sign in to your account
Username or Email Address


Password

 Remember Me


