ಬೆಂಗಳೂರು: ವಿಧಾನ ಸೌಧಕ್ಕೂ ಕೇತುಗ್ರಸ್ಥ ಸೂರ್ಯಗ್ರಹಣ ತಟ್ಟಿದೆ. ಇಂದು ಗ್ರಹಣಕ್ಕೆ ಹೆದರಿ ಒಬ್ಬರೇ ಒಬ್ಬ ಸಚಿವರು ವಿಧಾನ ಸೌಧದತ್ತ ಸುಳಿದಿಲ್ಲ. ಸಿಎಂ ಸೇರಿದಂತೆ ಯಾವೊಬ್ಬ ಸಚಿವರುಗಳು ತಮ್ಮ ಕಚೇರಿಯತ್ತ ಸುಳಿಯದ ಕಾರಣ ವಿಧಾನ ಸೌಧ ಬಿಕೋ ಅನ್ನುತ್ತಿತ್ತು.ಜನಪ್ರತಿನಿಧಿ ಆಗಮಿಸದ ಹಿನ್ನೆಲೆಯಲ್ಲಿ ವಿಧಾನ ಸೌಧದ ಕಾರಿಡಾರ್, ಪಾರ್ಕಿಂಗ್ ಎಲ್ಲವು ಖಾಲಿ ಖಾಲಿ ಆಗಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂದಿನಂತೆ ವಿಧಾನ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಜನರ ಸಮಸ್ಯೆ ಆಲಿಸಬೇಕಾದ ಸಚಿವರುಗಳು ಗ್ರಹಣಕ್ಕೆ ಹೆದರಿ ವಿಧಾನ ಸೌಧದತ್ತ ಸುಳಿದಿಲ್ಲ.ಸಚಿವರುಗಳು ಕಚೇರಿಗೆ ಬಂದರೆ ವಿಧಾನಸೌಧ ಜನಜಂಗುಳಿಯಿಂದ ಕೂಡಿರುತ್ತಿದೆ. ಮುಖ್ಯಮಂತ್ರಿಗಳು ಸೇರಿದಂತೆ ಯಾವೊಬ್ಬ ಸಚಿವರುಗಳು ವಿಧಾನ ಸೌಧದತ್ತ ಸುಳಿದಿಲ್ಲ. ಅದರಿಂದಾಗಿ ಪಾರ್ಕಿಂಗ್,ಕಾರಿಡಾರ್ ಎಲ್ಲವು ಬಿಕೋ ಎನ್ನುತ್ತಿದೆ.Sign in to your account
Username or Email Address


Password

 Remember Me


