ಬೆಂಗಳೂರು: ಕೇತುಗ್ರಸ್ಥ ಸೂರ್ಯಗಹ್ರಣ ಈಗಾಗಲೇ ಆರಂಭವಾಗಿದ್ದು, ಸೂರ್ಯನಲ್ಲಿ ಆಗುವ ಬದಲಾವಣೆಗಳನ್ನು ವೀಕ್ಷಿಸುವ ಕಾತುರದಲ್ಲಿ ಜನರು ಇದ್ದಾರೆ. ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಸೂರ್ಯಗ್ರಹಣದ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ.ಉಡುಪಿ, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು, ಧಾರವಾಡ, ಮಂಡ್ಯ, ಕಾರವಾರ, ಶಿವಮೊಗ್ಗ, ಬೆಳಗಾವಿ, ಮೈಸೂರು ಇನ್ನೂ ಅನೇಕ ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಸೂರ್ಯಗ್ರಹಣ ಗೋಚರವಾಗುತ್ತಿದೆ. ಆದರೆ ಬೆಂಗಳೂರಿನ ಕೆಲ ಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು ಸೂರ್ಯ ಗ್ರಹಣ ಸರಿಯಾಗಿ ಗೋಚರವಾಗುತ್ತಿಲ್ಲ. ಕೆಲವು ಭಾಗದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತಿದೆ.ಇಂದು ಬೆಳಗ್ಗೆ 8:04ಕ್ಕೆ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಿದ್ದು, ಬೆಳಗ್ಗೆ 11:04 ಗಂಟೆಗೆ ಮುಕ್ತಾಯವಾಗುತ್ತದೆ. ಈ ಬಾರಿ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಗ್ರಹಣವಾಗುತ್ತಿದೆ.ಕೇತುಗ್ರಸ್ಥ ಸೂರ್ಯಗ್ರಹಣ ಕಾಲ:
ಸೂರ್ಯಗ್ರಹಣ ಸ್ಪರ್ಶಕಾಲ – ಬೆಳಗ್ಗೆ 8:04 ಗಂಟೆ
ಸೂರ್ಯಗ್ರಹಣ ಮಧ್ಯಕಾಲ – ಬೆಳಗ್ಗೆ 9:26 ಗಂಟೆ
ಸೂರ್ಯಗ್ರಹಣ ಮೋಕ್ಷಕಾಲ – ಬೆಳಗ್ಗೆ 11:04 ಗಂಟೆ
ಗ್ರಹಣ ನಕ್ಷತ್ರ – ಮೂಲ
ಗ್ರಹಣ ಸಮಯ – 2 ಗಂಟೆ 59 ನಿಮಿಷSign in to your account
Username or Email Address


Password

 Remember Me


