ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿಯನ್ನು ಈಗಲೇ ಮನೆಯಿಂದ ಹೊರ ಬಿಸಾಕಿ ಎಂದು ದೀಪಿಕಾ ಗರಂ ಆಗಿದ್ದಾರೆ.ಬುಧವಾರ ಶೈನ್, ದೀಪಿಕಾ ಅವರನ್ನು ಕಾಡಿಸುತ್ತಿದ್ದರು. ಈ ವೇಳೆ ದೀಪಿಕಾ ನಿಮ್ದು ಈಗ ಅತಿಯಾಯ್ತು ಶೈನ್. ನಿಮ್ಮ ಟಾರ್ಚರ್ ತೆಡೆಯೋಕೆ ಆಗುತ್ತಿಲ್ಲ ಎಂದರು. ಆಗ ಶೈನ್ ನಾನು ಏಳು ತಿಂಗಳಿಂದ ಬೆಳೆಸಿದ ಗಡ್ಡವನ್ನು ತೆಗೆಸಿದ್ದೀರಾ ಎಂದು ಹೇಳಿದಾಗ ದೀಪಿಕಾ ಅದು ಟಾಸ್ಕ್, ಮುಗಿದು ಹೋದ ಕತೆ ಎಂದು ತಮಾಷೆಯಾಗಿಯೇ ತರಾಟೆಗೆ ತೆಗೆದುಕೊಂಡರು.ಶೈನ್ ಕಾಟ ತಡೆಯಲಾಗದೆ ದೀಪಿಕಾ ಶೈನ್ ಅವರನ್ನು ಮನೆಯಿಂದ ಹೊರ ಬಿಸಾಕಿ ಎಂದು ಹೇಳಿದ್ದಾರೆ. ಅಲ್ಲದೆ ತರಾಟೆಗೆ ತೆಗೆದುಕೊಳ್ಳುವಾಗ ದೀಪಿಕಾ, ಶೈನ್ ಅವರನ್ನು ಹೊಡೆದಿದ್ದಾರೆ. ಹೊಡೆದ ಬಳಿಕ ಬಿಗ್ ಬಾಸ್ ನಾನು ಶೈನ್ ಅವರ ಮೇಲೆ ಹಲ್ಲೆ ಮಾಡಿದ್ದೇನೆ. ನನ್ನನ್ನು ಮನೆಗೆ ಕಳುಹಿಸಿ ಎಂದು ಹೇಳಿದ್ದಾರೆ. ಈ ವೇಳೆ ಶೈನ್, ಚಂದನಾರಿಗೆ ನನ್ನ ಹಾಗೂ ದೀಪಿಕಾ ಲಗ್ಗೇಜ್ ತೆಗೆದುಕೊಂಡು ಬನ್ನಿ ನಾವಿಬ್ಬರು ಮನೆಯಿಂದ ಹೊರ ಹೋಗುತ್ತೇವೆ ಎಂದು ಹೇಳಿದ್ದಾರೆ.ಶೈನ್ ಮೇಲೆ ಹಲ್ಲೆ ಮಾಡುವಾಗ ದೀಪಿಕಾ, ಕುರಿ ಪ್ರತಾಪ್ ಹಾಗೂ ಚಂದನ್ ಅವರನ್ನು ಕರೆಯುತ್ತಾರೆ. ಈ ವೇಳೆ ಕುರಿ ಪ್ರತಾಪ್ ನಾನು 11ನೇ ದಿನಕ್ಕೆ ಬರುತ್ತೇನೆ ಎಂದು ತಮಾಷೆ ಮಾಡಿದ್ದಾರೆ.Sign in to your account
Username or Email Address


Password

 Remember Me


