ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಇನ್‍ಸ್ಟಾದಲ್ಲಿ ಮಗಳ ಫೋಟೋ ಹಂಚಿಕೊಂಡಿದ್ದಾರೆ.ಕ್ರಿಸ್ಮಸ್ ಹಬ್ಬವಿದ್ದ ಹಿನ್ನೆಲೆಯಲ್ಲಿ ಯಶ್, ತಮ್ಮ ಮಗಳು ಐರಾ ಕ್ರಿಸ್ಮಸ್ ಟ್ರೀ ಮುಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ “ಕ್ರಿಸ್ಮಸ್ ಟ್ರೀ ಇಲ್ಲಿ ಹೊಳೆಯುತ್ತಿರಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ಹೊಳೆಯುವ ಬೆಳಕು ಅದರ ಮುಂದೆ ನಿಂತಿದೆ. (ನಾನು ತಂದೆಯಾಗಿ ಮಾತನಾಡುತ್ತಿರುವುದು, ಏನೂ ಮಾಡುವುದಕ್ಕೆ ಆಗಲ್ಲ). ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  The Xmas tree may be shining, but the brightest light is standing next to it!! (Ok.. it’s the Daddy talking.. can’t help it though ????) MERRY CHRISTMAS everyone ???? #TheNameIsYashA post shared by  Yash (@thenameisyash) on Dec 25, 2019 at 10:27am PSTಇತ್ತ ರಾಧಿಕಾ ಪಂಡಿತ್ ಅವರು ಯಶ್ ಜೊತೆಗಿರುವ ಫೋಟೋ ಹಂಚಿಕೊಂಡು ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. “ಕಳೆದ ಎರಡು ಕ್ರಿಸ್ಮಸ್‍ಗೆ ಐರಾ ಮತ್ತು ಜೂನಿಯರ್ ಯಶ್ ಅಂತಹ ಅಮೂಲ್ಯವಾದ ಉಡುಗೊರೆಯನ್ನು ನಮಗೆ ನೀಡಿರುವುದಕ್ಕೆ ಸಂತಾಗೆ ಧನ್ಯವಾದಗಳು. ನಮ್ಮ ಜಾರುಬಂಡಿಯ ಮೇಲೆ ಸವಾರಿ ಮಾಡಲು ನಾವು ಸಿದ್ಧ. ಎಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದರು.ರಾಧಿಕಾ 2018 ಡಿಸೆಂಬರ್ ತಿಂಗಳಲ್ಲಿ ಐರಾಗೆ ಜನ್ಮ ಕೊಟ್ಟಿದ್ದರು. ಇನ್ನೂ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯಕ್ಕೆ ಜೂನಿಯರ್ ಯಶ್‍ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.  Ready to ride on our sleigh to thank Santa ???? for giving us the most precious gifts since last two Xmas, Ayra and Junior Y.. ♥️ (We must have been really good) ???? MERRY CHRISTMAS everyone!! ???? #radhikapandit #nimmaRPA post shared by  Radhika Pandit (@iamradhikapandit) on Dec 24, 2019 at 12:04pm PSTSign in to your account
Username or Email Address


Password

 Remember Me


