ಬಾಗಲಕೋಟೆ: ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷದ ಭವಿಷ್ಯ ಈಗ ಗೊತ್ತಾಗಲ್ಲ. ಮೊದಲು ಸಂಪುಟ ವಿಸ್ತರಣೆಯಾಗಲಿ, ಆಗ ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಲೇವಡಿ ಮಾಡಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಬಿಜೆಪಿಗೆ ಹೋಗಲು ಹಣ ಪಡೆದಿದ್ದಾರೆ. ಚುನಾವಣೆಯಲ್ಲಿ ಹಣ ಪಡೆದು ಈಗ ಆ ಶಾಸಕರು ಗೆದ್ದು ಮಂತ್ರಿ ಆಗುತ್ತಾರೆ. ಇಂತವರು ಮಂತ್ರಿ ಆದರೆ ರಾಜ್ಯ ಬೊಕ್ಕಸ ಉಳಿಯುತ್ತಾ ಅನ್ನೋ ಸಂಶಯ ಮೂಡುತ್ತಿದೆ. ಅಲ್ಲದೇ ಇದನ್ನು ನೋಡಿ ಬಿಜೆಪಿಯ ನಿಷ್ಠಾವಂತ ಶಾಸಕರು ಸುಮ್ಮನಿರುತ್ತಾರಾ? ಅವರವರೆ ಬಡಿದಾಡಿಕೊಂಡು ಅಧಿಕಾರದಿಂದ ನಿರ್ಗಮಿಸುವುದು ನಿಶ್ಚಿತ. ಇದು ತೀವ್ರವಾಗಿ ನಡೆಯುತ್ತದೆ ಎಂದು ಭವಿಷ್ಯ ನುಡಿದರು.ಮಂಗಳೂರು ಪೂರ್ವ ನಿಯೋಜಿತ ಗಲಭೆಯಲ್ಲಿ ಬಿಜೆಪಿಗರು ಯಾರು ತಪ್ಪಿತಸ್ಥರು ಎಂದು ಕಂಡುಹಿಡಿಯಬೇಕು. ಗಲಭೆ ಹಿಂದೆ ಕಾಂಗ್ರೆಸ್ಸಿಗರು ಇದ್ದಾರೆ ಅನ್ನೋದು ಶುದ್ಧ ಸುಳ್ಳು, ಕಲ್ಲು ತುಂಬಿಕೊಂಡಿದ್ದ ವಾಹನ ಯಾರದ್ದು ಎಂದು ಪತ್ತೆ ಮಾಡಲಿ. ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ಮಾಡಿದವರನ್ನು ಕಂಡು ಹಿಡಿಯಬೇಕು. ಆರೋಪಿಗಳ ಪತ್ತೆ ಮಾಡಿ ಶಿಕ್ಷೆ ಕೊಡಲಿ. ಸಿಐಡಿ ತನಿಖೆ ಸರಿಯಾಗಲ್ಲ, ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.Sign in to your account
Username or Email Address


Password

 Remember Me


