ಶಿವಮೊಗ್ಗ: ನಾಗರ ಹಾವಿಗೆ ಮುತ್ತು ಕೊಡಲು ಹೋದ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.ಭದ್ರಾವತಿಯ ತಮ್ಮಣ್ಣ ಕ್ಯಾಂಪ್‍ನ ಸೋನು ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ಸೇರಿದ ವ್ಯಕ್ತಿ. ಹೊಸಮನೆ ಬಡಾವಣೆಯಲ್ಲಿ ನಾಗರ ಹಾವೊಂದು ಕಾಣಿಸಿ ಕೊಂಡಿತ್ತು. ಈ ವೇಳೆ ಸ್ಥಳೀಯರು ಸೋನುವನ್ನು ಹಾವು ಹಿಡಿಯಲು ಕರೆಯಿಸಿದ್ದಾರೆ. ಪಾನಮತ್ತನಾಗಿ ಆಗಮಿಸಿದ್ದ ಸೋನು ಹಾವು ಹಿಡಿಯುವಾಗ ಚಮಕ್ ಮಾಡಲು ಮುತ್ತು ಕೊಡಲು ಹೋದಾಗ ಹಾವು ಆತನ ತುಟಿಗೆ ಕಚ್ಚಿದೆ.ಹಾವು ಕಚ್ಚಿದ ತಕ್ಷಣ ಸೋನುವಿನ ತುಟಿಯಿಂದ ರಕ್ತ ಬಂದಿದೆ. ತಕ್ಷಣ ಸೋನುನನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.Sign in to your account
Username or Email Address


Password

 Remember Me


