ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಬಳಿಯ ಸಿಟಿ ಸೆಂಟರ್ ಮಾಲ್‍ನ ಟಾಯ್ಲೆಟ್‍ನಲ್ಲಿ ಯುವತಿಯ ಸುಟ್ಟ ಶವ ಪತ್ತೆಯಾಗಿದೆ.ನಾಗರತ್ನ ಹೀರೆಮಠ (29) ಮೃತ ಯುವತಿ. ಈಕೆ ಸಿಟಿ ಸೆಂಟರ್ ಮಾಲ್‍ನಲ್ಲಿರೋ ವಿಜಯಲಕ್ಷ್ಮಿ ಡ್ರೆಸೆಸ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಮಧ್ಯಾಹ್ನ ಊಟಕ್ಕೆಂದು ಹೋಗಿದ್ದಳು. ಸ್ವಲ್ಪ ಸಮಯದ ನಂತರ ಟಾಯ್ಲೆಟ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಡೋರ್ ಮುರಿದು ನೋಡಿದಾಗ ನಾಗರತ್ನಳ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರೇಮ ವೈಪಲ್ಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇಲ್ಲಿ ಕೆಲ ಅನುಮಾನಗಳು ಸಹ ಹುಟ್ಟಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‍ನಿಂದ ಯುವತಿಗೆ ಬೆಂಕಿ ಹತ್ತಿದ್ದಿಯಾ ಎಂಬ ಅನುಮಾನ ಸಹ ವ್ಯಕ್ತವಾಗಿದೆ.ನಾಗರತ್ನಳಿಗೆ ಮಾಲ್‍ನಲ್ಲಿ ಸೀಮೆ ಏಣ್ಣೆ ಹೇಗೆ ಬಂತು ಎಂದು ಪೊಲೀಸರು ಅನುಮಾನ ಪಟ್ಟಿದ್ದಾರೆ. ಸದ್ಯಕ್ಕೆ ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಯುವತಿ ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೇಕಾಗಿದೆ.Sign in to your account
Username or Email Address


Password

 Remember Me


