ಚಿಕ್ಕಬಳ್ಳಾಪುರ: ಕೆಎಸ್ಆರ್‌ಟಿಸಿ ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಬಳಿ ನಡೆದಿದೆ.ಬಾಗೇಪಲ್ಲಿ ತಾಲೂಕಿನ ಸಜ್ಜರವಾರಪಲ್ಲಿ ನಿವಾಸಿ ಸುರೇಂದ್ರ (20) ಮೃತ ವಿದ್ಯಾರ್ಥಿ. ಸುರೇಂದ್ರ ಬೈಕ್ ಮೂಲಕ ಚಿಂತಾಮಣಿ ನಗರದ ಐಟಿಐ ಕಾಲೇಜಿಗೆ ಪ್ರತಿದಿನ ಹೋಗುತ್ತಿದ್ದನು. ಇಂದು ಮೃತ ಸುರೇಂದ್ರ ಅತಿವೇಗದಿಂದ ಬೈಕ್ ಓಡಿಸುತ್ತಿದ್ದನು. ಪರಿಣಾಮ ಚಿಲಕಲನೇರ್ಪು ಬಳಿ ಕೆರೆಯ ಏರಿ ಮೇಲೆ ಎದುರಗಡೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿಯ ರಭಸಕ್ಕೆ ಸುರೇಂದ್ರ ತಲೆಗೆ ಗಂಭೀರವಾಗಿ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಾಹಿತಿ ತಿಳಿದು ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಸ್ ವಶಕ್ಕೆ ಪಡೆದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಡಿದೆ.Sign in to your account
Username or Email Address


Password

 Remember Me


