ಮೈಸೂರು: ದೊಡ್ಡ ಹುದ್ದೆಯಲ್ಲಿ ಇರುವವರು ತಮ್ಮ ಕೆಳಗಿನ ಅಧಿಕಾರಿಗಳಿಗೆ ಕಿರುಕುಳ ನೀಡೋದು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಕೆಳ ಹಂತದ ಅಧಿಕಾರಿಯೇ ತನ್ನ ಮೇಲಿನ ಅಧಿಕಾರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೆಳ ಹಂತದ ಅಧಿಕಾರಿ ಹಾಗೂ ಅವರ ಪತಿಯಿಂದ ಆಗುತ್ತಿರುವ ಕಿರುಕುಳ ಹೇಳಿಕೊಂಡು ಹಿರಿಯ ಅಧಿಕಾರಿ ಶಾಸಕರ ಮುಂದೆ ಕಣ್ಣೀರಿಟ್ಟಿದ್ದಾರೆ. ತಾಲೂಕಿನ ಕಳಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಕಣ್ಣೀರಿಟ್ಟಿದ್ದಾರೆ.ನವಿಲೂರು ಉಪ ಪ್ರಾಥಮಿಕ ಕೇಂದ್ರ ಕಿರಿಯ ಸಹಾಯಕ ವೈದ್ಯಾಧಿಕಾರಿ ಶಾರದಾ ಹಾಗೂ ಇವರ ಪತಿ ಗೋಪಾಲ ಕೃಷ್ಣ ಎಂಬವರು ನನಗೆ ಕೆಲಸದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮುಕ್ತಿ ಕೊಡಿಸಿ ಎಂದು ಶಾಸಕರಾದ ಹರ್ಷವರ್ಧನ್ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ ಮುಂದೆ ಕಣ್ಣೀರಿಟ್ಟರು.ಕೆಲಸದ ವಿಚಾರದಲ್ಲಿ ಸಹಾಯಕ ವೈದ್ಯಾಧಿಕಾರಿ ಶಾರದಾ ಅವರಿಗೆ ನೋಟಿಸ್ ನೀಡಿದ್ದೆ. ಈ ಕಾರಣಕ್ಕೆ ನನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಪತಿ ಆರ್.ಟಿ.ಐ.ನಲ್ಲಿ ಅನಗತ್ಯವಾಗಿ ಅರ್ಜಿ ಸಲ್ಲಿಸಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿದರು. ಮನವಿ ಆಲಿಸಿದ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ವಿಷಯ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.Sign in to your account
Username or Email Address


Password

 Remember Me


