– ಮುನಿರತ್ನ ಕಾನೂನು ಬಾಹಿರ ಕೆಲಸ ಮಾಡಿದ್ದರೆ ಕ್ರಮ ಆಗುತ್ತೆ ಎಂದ ಸಚಿವಬೆಂಗಳೂರು: ನಮ್ಮ ಸರ್ಕಾರ ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಮಾಡುತ್ತಿರುವವರು ಅವರು ಎಂದು ಬಿಜೆಪಿ ನಾಯಕರ ವಿರುದ್ಧ ಸರ್ಕಾರ ಎಫ್‌ಐಆರ್ ದಾಖಲಿಸಿರುವ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಬಿಜೆಪಿ (BJP) ನಾಯಕರ ವಿರುದ್ಧ ಸರ್ಕಾರ ಎಫ್‌ಐಆರ್ (FIR) ದಾಖಲಿಸಿರುವ ವಿಚಾರವಾಗಿ ಮಾತನಾಡಿದ್ದಾರೆ. ನಾಗಮಂಗಲ ಗಲಭೆ (Nagamangala Violence) ವಿಚಾರವಾಗಿ ಸುಳ್ಳು ಮಾಹಿತಿ ಹಂಚಿಕೆ ಆರೋಪದಡಿ ಶೋಭಾ ಕರಂದ್ಲಾಜೆ (Shobha Karandlaje) ಹಾಗೂ ಆರ್.ಅಶೋಕ್ (R.AShok) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಮ್ಮ ಸರ್ಕಾರ ಯಾವುದೇ ದ್ವೇಷ ಕಾರಣ ಮಾಡುತ್ತಿಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ. ಇನ್ನೂ ದ್ವೇಷ ರಾಜಕಾರಣ ಮಾಡುತ್ತಿರುವವರು ಅವರು. ನಾವು ಕಾನೂನು ವಿರುದ್ಧವಾಗಿ ಮಾಡಿದೀವಿ ಎಂದು ಅವರು ಹೇಳುತ್ತಿರಲಿ. ನಮ್ಮನ್ನು ಜನ ಆರಿಸಿದ್ದಾರೆ. ನಾವು ಕೆಲಸ ಮಾಡುತ್ತಿದ್ದೇವೆ. ಇದನ್ನು ಬಿಟ್ಟು ನಮಗೆ ದ್ವೇಷ ರಾಜಕಾರಣದ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಬ್ಲೇಡ್‍ನಿಂದ ಹಲ್ಲೆ – ಯುವಕನ ಕಿವಿ ಕಟ್ಇದೇ ವೇಳೆ ಮುನಿರತ್ನ (Munirathna) ವಿಚಾರವಾಗಿ ಮಾತನಾಡಿದ ಅವರು, ಮುನಿರತ್ನ ವಿರುದ್ಧ ಮಹಿಳೆ ದೂರು ಕೊಟ್ಟ ವಿಚಾರವಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಕಾನೂನು ಬಾಹಿರ ಕೆಲಸ ಮಾಡಿದ್ದರೆ, ಏನು ಕ್ರಮ ಆಗಬೇಕು ಅದು ಆಗುತ್ತದೆ ಎಂದು ತಿಳಿಸಿದರು.ಒಂದು ದೇಶ ಒಂದು ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಇನ್ನೂ ಬಹಳಷ್ಟು ವಿವರಣೆ ಬರಬೇಕಿದೆ. ಕನಿಷ್ಠ 2/3ರಷ್ಟು ರಾಜ್ಯಗಳು ಇದಕ್ಕೆ ಒಪ್ಪಿಗೆ ಕೊಡಬೇಕಿರುತ್ತದೆ. ಈಗತಾನೇ ರಾಮನಾಥ್ ಕೋವಿಂದ್ (Ram Nath Kovind) ವರದಿ ಕೊಟ್ಟಿದ್ದಾರೆ. ವರದಿಯನ್ನು ಅಧಿವೇಶನದಲ್ಲಿ ಮಂಡಿಸುತ್ತಾರೆ. ಮುಂದೇನು ಬೆಳವಣಿಗೆ ಆಗುತ್ತದೆಯೋ ನೋಡಬೇಕು. ಅದಾದ ಬಳಿಕ ರಾಜ್ಯಗಳಿಗೆ ಬಂದ ನಂತರ ಅದನ್ನು ಅಸೆಂಬ್ಲಿಗೆ ಒಪ್ಪಿಸಬೇಕಾ? ಅಥವಾ ರಾಜ್ಯಗಳ ಒಪ್ಪಿಗೆ ಬೇಕಾ? ಎಂದು ನೋಡೋಣ ಎಂದು ಹೇಳಿದರು.ಇದನ್ನೂ ಓದಿ: ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸುSign in to your account
Username or Email Address


Password

 Remember Me


