ವಿಜಯಪುರ: ನಮ್ಮ ಹೈಕಮಾಂಡ್ ಹೇಳಬೇಕು, ಇವ್ರು ಯಾರು ಹೇಳೋಕೆ ಎಂದು ವಿಜಯೇಂದ್ರ ಹೇಳಿಕೆ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ (Zammer Ahmed) ಟಾಂಗ್ ಕೊಟ್ಟಿದ್ದಾರೆ.ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ದಸರಾ ಬಳಿಕ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ನೀಡುತ್ತಾರೆ ವಿಜಯೇಂದ್ರ ಹೇಳಿದ್ದಾರೆ. ನಿವೇನು ಕಾಂಗ್ರೆಸ್ (Congress) ಹೈಕಮಾಂಡಾ? ನೀವು ಬಿಜೆಪಿ ಪಕ್ಷದ ಅಧ್ಯಕ್ಷರು. ನೀವು ಹೇಳಿದಾಗ ರಾಜೀನಾಮೆ ನೀಡೋಕೆ ಆಗತ್ತಾ? ಎಂದು ಪ್ರತಿಕ್ರಿಯಿಸಿದ್ದಾರೆ.ಇದನ್ನೂ ಓದಿ: ಪೋಕ್ಸೋ ಕೇಸ್ – ಮುರುಘಾ ಶ್ರೀಗೆ ಜಾಮೀನು ಮಂಜೂರುನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ನಮ್ಮ ಹೈಕಮಾಂಡ್ ಸಿದ್ದರಾಮಯ್ಯ ಜೊತೆಗೆ ಇದೆ. ಇದನ್ನು ನಮ್ಮ ಹೈಕಮಾಂಡ್ ಹೇಳಬೇಕು, ಇವ್ರು ಯಾರು ಹೇಳೋಕೆ? ನಮ್ಮ ಪಕ್ಷದ ವಿಚಾರ ಹೇಳೋಕೆ ವಿಜಯೇಂದ್ರ ಯಾರು? ನೂರಕ್ಕೆ ನೂರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ರಾಜೀನಾಮೆ ಇಲ್ಲ ಎಂದು ವೇಣುಗೋಪಾಲ, ಸುರ್ಜೆವಾಲಾ ಬೆಂಗಳೂರಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ. ಹೈಕಮಾಂಡ್ ನಿಮ್ಮ ಜೊತೆ ಇದೆ ಎಂದು ಬೆಂಗಳೂರಿಗೆ ಬಂದು ಹೇಳಿದ್ದಾರೆ ಎಂದು ಕಿಡಿಕಾರಿದರು.ಸತೀಶ್ ಜಾರಕಿಹೊಳಿ ಸಿಎಂ ಘೋಷಣೆ ವಿಚಾರ:
ಸತೀಶ್ ಜಾರಕಿಹೊಳಿ (Satish Jarkiholi) ಸಿಎಂ ಘೋಷಣೆ ವಿಚಾರವಾಗಿ ಮಾತನಾಡಿ, ಕಾರ್ಯಕ್ರಮವೊಂದರಲ್ಲಿ ಜನಾ ಕೂಗುತ್ತಾರೆ. ಅಭಿಮಾನಿಗಳು ಕೂಗಿದ ತಕ್ಷಣ ಸಿಎಂ ಆಗಿ ಬಿಡ್ತಾರಾ? ನನ್ನ ಅಭಿಮಾನಿಗಳು ಕೂಗ್ತಾರೆ, ನಾನು ಸಿಎಂ ಆಗ್ತೀನಾ ಎಂದು ವ್ಯಂಗ್ಯವಾಡಿದರು.ವಿಜಯೇಂದ್ರ ಸತೀಶ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನೀವು ಹೇಳುತ್ತಿದ್ದೀರಿ ನಾನು ಕೇಳುತ್ತಿದ್ದೀನಿ. ಮಾಹಿತಿ ತೆಗೆದುಕೊಂಡು ಹೇಳುತ್ತೇನೆ ಎಂದು ಹೇಳಿದರು.ಇದನ್ನೂ ಓದಿ:  ಚನ್ನಪಟ್ಟಣದಲ್ಲಿ ಟಿಕೆಟ್ ಕಗ್ಗಂಟು – ಟಿಕೆಟ್‌ಗಾಗಿ ದೆಹಲಿಗೆ ಸಿಪಿವೈ ಯಾತ್ರೆSign in to your account
Username or Email Address


Password

 Remember Me


