ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವ 2020ರ ಪ್ರಚಾರಕ್ಕಾಗಿ ಹಾಗೂ ಸ್ಥಳೀಯರನ್ನು ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಅಧಿಕಾರಿಗಳು ಮೇಣದಬತ್ತಿ ಮೊರೆ ಹೋಗಿದ್ದಾರೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒಗಳು, ಗಂಗಾವತಿ ಇಒ, ಡಾ. ಡಿ. ಮೋಹನ್ ನೇತೃತ್ವದಲ್ಲಿ ಆನೆಗೊಂದಿ ಗ್ರಾಮದಲ್ಲಿ ಮೇಣದಬತ್ತಿ ಉರಿಸಿ ಉತ್ಸವ-2020 ಎಂದು ಸಂದೇಶ ಸಾರುವ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದರು.ಅಲ್ಲದೇ ಇದೇ ಸಂದರ್ಭದಲ್ಲಿ ಮನೆಗಳನ್ನು ಸಿಂಗರಿಸಿ ಉತ್ಸವದ ದಿನಗಳಲ್ಲಿ ಮನೆಯ ಮುಂದೆ ತಳೀರು ತೋರಣ ಕಟ್ಟಿ, ರಂಗೋಲಿ ಹಾಕಿ ಸಿಂಗರಿಸುವಂತೆ ಮನವಿ ಮಾಡಲಾಯಿತು.Sign in to your account
Username or Email Address


Password

 Remember Me


