ಚಾಮರಾಜನಗರ: ಮಾನಸ ಶಿಕ್ಷಣ ಸಂಸ್ಥೆಯ ಆರ್. ಸಿದ್ದೇಗೌಡ – ಲಿಂಗಮ್ಮ ಸ್ಮರಣಾರ್ಥ ಮಾನಸ ಪ್ರಶಸ್ತಿ 2019 ಅನ್ನು ಸಾಲುಮರದ ತಿಮ್ಮಕ್ಕ ಅವರಿಗೆ ನೀಡಲಾಗುತ್ತಿದೆ.ಈ ಬಾರಿ ಮಾನಸ ಪ್ರಶಸ್ತಿ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇದೇ 27ರಿಂದ 29ರವರೆಗೆ ಮಾನಸೋತ್ಸವ ಕಾರ್ಯಕ್ರಮ ನಡೆಯಲಿದೆ. 27ರ ಬೆಳಗ್ಗೆ 10ಕ್ಕೆ ಸಚಿವ ಸಿ.ಟಿ.ರವಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ಈ ಬಾರಿ 25 ಸಾವಿರ ರೂ. ನಿಂದ 50 ಸಾವಿರ ರೂ.ಗೆ ಪ್ರಶಸ್ತಿ ಮೊತ್ತ ಹೆಚ್ಚಿಸಲಾಗಿದೆ. ಈ ಹಿಂದೆ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ, ಕವಿ ನಿಸಾರ್ ಅಹಮ್ಮದ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ರೈತ ಹೋರಾಟಗಾರ ಜಿ. ಮಾದೇಗೌಡ, ಭತ್ತದ ವಿಜ್ಞಾನಿ ಮಹಾದೇವಪ್ಪ, ಸಂಸದ ವಿ. ಶ್ರೀನಿವಾಸಪ್ರಸಾದ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಉಳಿದಂತೆ 3 ದಿನಗಳ ಕಾಲ ಕಾಲೇಜಿನ ವಿದ್ಯಾರ್ಥಿಗಳು, ಚಿತ್ರನಟರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.Sign in to your account
Username or Email Address


Password

 Remember Me


