ಬೆಂಗಳೂರು: ಹೆಡ್ ಫೋನ್ ಕೊಂಡುಕೊಳ್ಳುವ ಸಲುವಾಗಿ ಮೊಬೈಲ್ ಅಂಗಡಿಗೆ ಬಂದಿದ್ದ ಯುವಕನೊಬ್ಬ ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದಾನೆ.ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲರುವ ಮೊಬೈಲ್ ಪ್ಯಾಲೇಸ್ ಅಂಗಡಿಯಲ್ಲಿ ಮಾಲೀಕನಿಗೆ ಅದು ತೋರಿಸಿ, ಇದು ಬೇಡ, ಮತ್ತೊಂದು ತೋರಿಸಿ ಎಂದು ಸತಾಯಿಸಿದ್ದಾನೆ. ಕೊನೆಗೆ ಮಾಲೀಕ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಳ್ಳುತ್ತಿದ್ದ ವೇಳೆ ಮೊಬೈಲ್ ಕದಿಯಲು ಯತ್ನಿಸಿದ್ದಾನೆ.ಕಳ್ಳ ಮೊದಲಿಗೆ ಫೋನ್ ಬಾಕ್ಸ್ ತೆಗೆದುಕೊಂಡು ಪ್ಯಾಂಟ್‍ಂನ ಹಿಂಬದಿ ಜೇಬಿಗೆ ಇಟ್ಟುಕೊಳ್ಳುತ್ತಾನೆ. ಆದರೆ ಯಾರೋ ನೋಡಿದಂತಾಗಿ ಮತ್ತೆ ಟೇಬಲ್ ಮೇಲೆ ಇಟ್ಟು ನೋಡುತ್ತಾ ನಿಂತುಕೊಳ್ಳುತ್ತಾನೆ. ಬಳಿಕ ತಾನು ತಂದಿದ್ದ ಹ್ಯಾಂಡ್ ಬ್ಯಾಗ್ ಗೆ 18 ಸಾವಿರ ಬೆಲೆಯ ರೆಡ್‍ಮಿ ಫೋನ್ ಹಾಕಿಕೊಂಡು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗುತ್ತಾನೆ.ಚಾಲಕಿ ಮೊಬೈಲ್ ಕಳ್ಳ ಕಳ್ಳತನ ಮಾಡಿದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.Sign in to your account
Username or Email Address


Password

 Remember Me


