ಬೆಂಗಳೂರು: ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಟಿ ರಾಧಿಕಾ ಪಂಡಿತ್ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.ರಾಧಿಕಾ ಪಂಡಿತ್ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಕ್ರಿಸ್‍ಮಸ್ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. “ಕಳೆದ ಎರಡು ಕ್ರಿಸ್‍ಮಸ್‍ಗೆ ಐರಾ ಮತ್ತು ಜೂನಿಯರ್ ಯಶ್ ಅಂತಹ ಅಮೂಲ್ಯವಾದ ಉಡುಗೊರೆಯನ್ನು ನಮಗೆ ನೀಡಿರುವುದಕ್ಕೆ ಸಂತಾಗೆ ಧನ್ಯವಾದಗಳು. ನಮ್ಮ ಜಾರುಬಂಡಿಯ ಮೇಲೆ ಸವಾರಿ ಮಾಡಲು ನಾವು ಸಿದ್ಧ. ಎಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.ಕ್ರಿಸ್‍ಮಸ್ ಹಬ್ಬಕ್ಕಾಗಿ ಅಲಂಕೃತವಾಗಿರುವ ಜಾರುಬಂಡಿಯ ಪಕ್ಕದಲ್ಲಿ ಪತಿ ಯಶ್ ಜೊತೆ ರಾಧಿಕಾ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ರಾಧಿಕಾ ವಿಶ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.ರಾಧಿಕಾ 2018 ಡಿಸೆಂಬರ್ ತಿಂಗಳಲ್ಲಿ ಐರಾಗೆ ಜನ್ಮ ಕೊಟ್ಟಿದ್ದರು. ಇನ್ನೂ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯಕ್ಕೆ ಜೂನಿಯರ್ ಯಶ್‍ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.https://www.instagram.com/p/B6d8oG0g0Cc/ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೇಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.Sign in to your account
Username or Email Address


Password

 Remember Me


