ಬೀದರ್: ಎಮ್ಮೆ ರಕ್ಷಿಸಲು ಹೋಗಿದ್ದ ಯುವಕನ್ನೊಬ್ಬ ಕೆರೆ ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಗೋಪಾಲ ರೆಡ್ಡಿ ಪಲರಡ್ಡೆ(22) ಮೃತ ಯುವಕ. ಇಂದು ಮಧ್ಯಾಹ್ನ ಎಮ್ಮೆ ಮೇಯಿಸಲೆಂದು ಜಮೀನಿಗೆ ತೆರಳಿದಾಗ, ಗ್ರಾಮದ ಸಮೀಪವೇ ಇರುವ ಕೆರೆ ನೀರಿನಲ್ಲಿ ಇಳಿದ ಎಮ್ಮೆ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೆ ಒದ್ದಾಡುತ್ತಿತ್ತು.ಇದನ್ನು ಗಮನಿಸಿದ ಗೋಪಾಲರೆಡ್ಡಿ ನೀರಿನಿಂದ ಎಮ್ಮೆ ಹೊರ ತರಲೆಂದು ತಾನು ಕೆರೆಗೆ ಇಳಿದಿದ್ದಾನೆ. ಆದರೆ ತಾನು ಕೂಡ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ಯುವಕನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ತಲುಪವಷ್ಟರಲ್ಲಿ ಯುವಕ ಮೃತಪಟ್ಟಿದ್ದ.Sign in to your account
Username or Email Address


Password

 Remember Me


