ತುಮಕೂರು: ವಿದ್ಯುತ್ ಹೈ ಟೆನ್ಷನ್ ವೈರ್ ತಗುಲಿದ ಪರಿಣಾಮ ಟಿಪ್ಪರ್ ಲಾರಿಯೊಂದು ಹೊತ್ತಿ ಉರಿದ ಘಟನೆ ಶಿರಾ ನಗರದಲ್ಲಿ ನಡೆದಿದೆ.ನಗರದ ಮಹಾಲಿಂಗಪ್ಪ ಎನ್ನುವವರಿಗೆ ಸೇರಿದ ಜೈನ್ ಡಾಬಾ ಬಳಿ ಇರುವ ಜಮೀನಿಗೆ ಟಿಪ್ಪರ್ ಮೂಲಕ ಮಣ್ಣು ಸಾಗಿಸಲಾಗುತಿತ್ತು. ಈ ವೇಳೆ ಜಮೀನು ಮೂಲಕ ಹಾದು ಹೋದ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಏಕಾಏಕಿ ಬೆಂಕಿ ಹೊತ್ತಿ ಉರಿದಿದೆ. ಬೆಂಕಿ ಹತ್ತಿಕೊಳ್ಳುತಿದ್ದಂತೆ ಚಾಲಕ ಟಿಪ್ಪರ್ ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಡೀಸೆಲ್ ಟ್ಯಾಂಕ್‍ಗೆ ಬೆಂಕಿ ತಗುಲಿಲ್ಲ. ಡೀಸೆಲ್ ಟ್ಯಾಂಕ್ ಗೆ ಬೆಂಕಿ ತಲುಗುಲಿದರೆ ಟಿಪ್ಪರ್ ಲಾರಿ ಸಂಪೂರ್ಣ ಭಸ್ಮವಾಗುವ ಸಾಧ್ಯತೆ ಇತ್ತು. ಅಲ್ಲದೇ ಅಕ್ಕಪಕ್ಕ ಬೆಂಕಿ ವ್ಯಾಪಿಸಿ ದುರಂತ ಸಂಭವಿಸುತಿತ್ತು. ಲಾರಿ ಭಾಗಶಃ ಸುಟ್ಟು ಕರಕಲಾಗಿರುವುದರಿಂದ ಸುಮಾರು 8 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.Sign in to your account
Username or Email Address


Password

 Remember Me


