ಕೋಲಾರ: ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರು ರಕ್ಷಣೆಗಾಗಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಹೆಚ್ಚು ಶೇರ್ ಮಾಡುವ ಮೂಲಕ ನಮಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.ಕೋಲಾರ ತಾಲೂಕು ಹೊಲ್ಲಂಬಳ್ಳಿ ಗ್ರಾಮದ ಮಧುವಾಣಿ ಹಾಗೂ ಮುಳಬಾಗಿಲು ತಾಲೂಕು ಚೋಳಗುಂಟ ಗ್ರಾಮದ ಭರತ್ ಪ್ರೀತಿಸಿ ಮದುವೆಯಾದ ಪ್ರೇಮಿಗಳು. ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ. ಭರತ್ ವಿರುದ್ಧ ಸುಖಾಸುಮ್ಮನೆ ದೂರು ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಪ್ರೇಮಿಗಳು ಹೇಳಿಕೊಂಡಿದ್ದಾರೆ.ಮನೆಯವರ ವಿರೋಧದ ನಡುವೆ ಓಡಿ ಹೋಗಿ ಮಾದುವೆಯಾಗಿರುವ ಪ್ರೇಮಿಗಳು, ಸದ್ಯ ಆಂಧ್ರ ಪ್ರದೇಶದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲಿಂದ ವಿಡಿಯೋ ಮಾಡಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಸೂಕ್ತ ರಕ್ಷಣೆ ನೀಡುವುದಾಗಿ ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ಪ್ರೇಮಿಗಳಿಗೆ ಅಭಯ ನೀಡಿದ್ದಾರೆ.ವಿಡಿಯೋಲ್ಲೇನಿದೆ?
ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ. ನಾನು ಕೋಲಾರ ತಾಲೂಕು ಹೊಲ್ಲಂಬಳ್ಳಿ ಗ್ರಾಮದ ಮಧುವಾಣಿ, ನಾನು ಭರತ್ ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಆದರೆ ನಮ್ಮ ಮನೆಯವರ ಕಡೆಯವರು ಹುಡುಗನ ಮನೆಗೆ ತೆರಳಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಹುಡುಗಿಯನ್ನು ಭರತ್ ಅಪಹರಿಸಿದ್ದಾನೆ ಎಂದು ಸುಳ್ಳು ದೂರು ದಾಖಲಿಸಿದ್ದಾರೆ. ಹೀಗಾಗಿ ನಮ್ಮ ಮನೆಯವರ ಕಡೆಯಿಂದ ನಮಗೆ ಬೆದರಿಕೆ ಕರೆ ಬರುತ್ತಿದೆ. ನಾವು ಸಾಯಬೇಕೋ? ಬದುಕಬೇಕೋ ಎಂಬುದು ತಿಳಿಯುತ್ತಿಲ್ಲ. ನೀವೆಲ್ಲರೂ ನಮಗೆ ಸಹಾಯ ಮಾಡಬೇಕು. ಭರತ್‍ನ ತಂದೆ, ತಾಯಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದ್ದು, ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡುವ ಮೂಲಕ ನಮ್ಮ ಪೋಷಕರಿಗೆ ತಲುಪಿಸಿ ಎಂದು ವಿಡಿಯೋದಲ್ಲಿ ಹುಡುಗಿ ಕೇಳಿಕೊಂಡಿದ್ದಾಳೆ.Sign in to your account
Username or Email Address


Password

 Remember Me


