ಬಳ್ಳಾರಿ: ನನಗೂ ಕೂಡ ನನ್ನ ಮಗನ ಮದುವೆಯನ್ನು ಬೆಂಗಳೂರು ಪ್ಯಾಲೇಸ್‍ನಲ್ಲೇ ಮಾಡಬೇಕಂತಾ ಆಸೆ ಇದೆ ಎಂದು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಗನ ವಿವಾಹದ ಸೀಕ್ರೆಟ್ ಅನ್ನು ಬಿಚ್ಚಿಟ್ಟರು.ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ಆರಾಧ್ಯದೈವ ಬಸವೇಶ್ವರ ಕಾರ್ತಿಕೋತ್ಸವದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ನನ್ನ ಮಗನ ಮದುವೆಯನ್ನು ಬೆಂಗಳೂರು ಪ್ಯಾಲೇಸ್ ನಲ್ಲಿ ಮಾಡಬೇಕು ಅಂತಾ ಕನಸು ಕಾಣುತ್ತಿದ್ದೀನಿ. ನನ್ನ ಮಗ ಇಂಜಿನಿಯರ್, ಯಾರಾದರೂ ಪಂಚಮಸಾಲಿ ಕನ್ಯಾ ಇದ್ದರೆ ನೋಡ್ರಪ್ಪಾ ಒಂದು ಚೂರ್ ಎಂದರು.ನನಗೆ ಒಬ್ಬನೇ ಮಗ ಇದ್ದಾನೆ, ನಾನು ಸಮಾಜಕ್ಕಾಗಿ ನನ್ನ ಮಗನನ್ನ ತ್ಯಾಗ ಮಾಡಲ್ಲ. ರಾಜಕಾರಣಿಗಳು ಮುಖವಾಡ ಹಾಕಿರ್ತಾರೆ. ಆದರೆ ಸ್ವಾಮಿಗಳು ಮುಖವಾಡ ಹಾಕಿರಲ್ಲ. ಅವರಿಗೂ ತಂದೆ-ತಾಯಿ ಇರ್ತಾರೆ. ಆದರೆ ಸಮಾಜಕ್ಕಾಗಿ ತ್ಯಾಗ ಮಾಡಿ ನಿಸ್ವಾರ್ಥ ಸೇವೆ ಮಾಡುತ್ತಾರೆ. ನಾವು ಸಮಾಜಕ್ಕೆ ಮಕ್ಕಳನ್ನ ತ್ಯಾಗ ಮಾಡಲ್ಲ. ಸ್ವಾಮಿಗಳು ಅವರ ಜೀವನವನ್ನೇ ತ್ಯಾಗ ಮಾಡುತ್ತಾರೆ ಎಂದು ಹೇಳುತ್ತಾ ವೇದಿಕೆಯಲ್ಲಿ ತಮ್ಮ ಮಗನ ಮದುವೆ ಬಗ್ಗೆ ಮಾತನಾಡಿದ್ದಾರೆ.Sign in to your account
Username or Email Address


Password

 Remember Me


