ಚಾಮರಾಜನಗರ: ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಚಾಮರಾಜನಗರ ಪೂರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಮೂವರು ಆರೋಪಿಗಳಿಂದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಚಾಮರಾಜನಗರದ ಕುಮಾರ್, ಬೆಂಗಳೂರಿನ ಸತ್ಯ, ಮಣಿ ಬಂಧಿತ ಆರೋಪಿಗಳು. ಇಂದು ಬೆಳಗ್ಗೆ ಚಾಮರಾಜನಗರ ತಾಲೂಕಿನ ಚಿಕ್ಕ ಹೊಳೆ ಚೆಕ್ ಪೋಸ್ಟ್ ಬಳಿ ಅನುಮಾನಸ್ಪದವಾಗಿ ಇಬ್ಬರು ಬೈಕ್ ಸವಾರರು ಓಡಾಡುತ್ತಿದ್ದರು. ಅವರನ್ನು ಕರೆದು ವಿಚಾರಣೆ ನಡೆಸುವಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ಇವರು ಬೆಂಗಳೂರಿನಿಂದ ಕದ್ದ ಬೈಕ್‍ಗಳನ್ನು ಚಾಮರಾಜನಗರದಲ್ಲಿ, ಚಾಮರಾಜನಗರದಲ್ಲಿ ಕದ್ದ ಬೈಕ್‍ಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಸಂತೇಮರಹಳ್ಳಿ, ಚಾಮರಾಜನಗರ, ಬೆಂಗಳೂರು ಹಲವೆಡೆ ಪ್ರಕರಣ ದಾಖಲಾಗಿರುವ ಬೈಕ್‍ಗಳನ್ನು ಪೊಲೀಸರು ವಶ ಪಡೆದುಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದೆ.ಈ ಮೂವರ ಜೊತೆ ಹಲವರು ಕೈ ಜೋಡಿಸಿದ್ದಾರೆ. ಹೀಗಾಗಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಬೇಕಾಗಿದೆ ಎಂದು ಎಸ್‍ಪಿ ಆನಂದ್ ಕುಮಾರ್ ಮಾಹಿತಿ ನೀಡಿದ್ದಾರೆ.Sign in to your account
Username or Email Address


Password

 Remember Me


