ಮೈಸೂರು: ಕಾಂಗ್ರೆಸ್ ಸೊಳ್ಳೆ ಇದ್ದಂತೆ ಎಂದು ಮಂಗಳೂರು ಗಲಭೆ ದೃಶ್ಯಾವಳಿ ಕುರಿತು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಕೊಚ್ಚೆ ಎಲ್ಲಿರುತ್ತೋ ಅಲ್ಲಿಗೆ ಸೊಳ್ಳೆ ಹುಡುಕಿಕೊಂಡು ಹೋಗುತ್ತೆ. ಕಾಂಗ್ರೆಸ್ ಎಲ್ಲಿರುತ್ತೋ ಅಲ್ಲಿ ನಿರುದ್ಯೋಗ, ಅಕ್ಷರತೆ, ದೌರ್ಜನ್ಯ ಬಡತನ ಇದ್ದೆ ಇರುತ್ತದೆ. ಅವರನ್ನೆಲ್ಲ ಇಟ್ಟುಕೊಂಡು ಈ ರೀತಿಯ ಗಲಭೆ ಮಾಡಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಸೃಷ್ಟಿ ಮಾಡಿರೋ ಮರಿ ಟಿಪ್ಪುಗಳಿಂದ ಮಂಗ್ಳೂರಲ್ಲಿ ಕೃತ್ಯ: ಪ್ರತಾಪ್ ಸಿಂಹಈ ರೀತಿಯ ಗಲಭೆ ಮಾಡುತ್ತಿರುವವರು ಸಿದ್ದರಾಮಯ್ಯ ಸೃಷ್ಟಿಸಿದ ಮರಿ ಟಿಪ್ಪುಗಳು. ಮರಿ ಟಿಪ್ಪುಗಳಿಂದ ಈ ರೀತಿಯ ಕೃತ್ಯ ನಡೆಯುತ್ತಿದೆ. ಆಸ್ಪತ್ರೆಗೆ ನುಗ್ಗಿ ಬಾಗಿಲು ಹಾಕಿಕೊಂಡು ರೋಗಿಗಳ ಮೇಲೆ ಹಲ್ಲೆ ನಡೆಸುತ್ತಾರೆ. ಆ ರೀತಿಯ ಅಮಾನವೀಯ ಕೃತ್ಯ ನಡೆಸುವುದು ಯಾರು ಎಂಬುದು ಈಗ ಗೊತ್ತಾಗಿದೆ ಎಂದು ಹೇಳಿದರು.ಕಾಂಗ್ರೆಸ್‍ಗೆ ಅಧಿಕಾರದ ಚಡಪಡಿಕೆ ಶುರುವಾಗಿದೆ. ಬಿಜೆಪಿ ಇದ್ದ ಕಡೆ ಈ ರೀತಿ ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯೋ ಹುನ್ನಾರ ಮಾಡುತ್ತಿದ್ದಾರೆ. ಕೋಮು ಸೃಷ್ಟಿಸಿ ಅಧಿಕಾರ ಹಿಡಿಯುವ ಯು.ಟಿ.ಖಾದರ್ ಹೇಳಿಕೆ, ಸಿದ್ದರಾಮಯ್ಯ ನಡುವಳಿಕೆಯೇ ಇದಕ್ಕೆ ಸಾಕ್ಷಿ. ಈ ಮೂಲಕ ಅಲ್ಪಾ ಸಂಖ್ಯಾತರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.Sign in to your account
Username or Email Address


Password

 Remember Me


